ಗೋವಾದಲ್ಲಿ ಸರಳ ಬಹುಮತದತ್ತ ಬಿಜೆಪಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಖುಷಿಯಲ್ಲಿ ಕಮಲ ಪಡೆ

goa cm
Published on

ಪಣಜಿ: ಭಾರೀ ಕುತೂಹಲ ಮೂಡಿಸಿರುವ ಪಂಚರಾಜ್ಯ ಚುನಾವಣೆಯ ಫಲಿತಾಂಶ ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಗೋವಾದಲ್ಲಿ ಬಿಜೆಪಿ ಸರಳ ಬಹುಮತದತ್ತ ಸಾಗಿದೆ. ಮ್ಯಾಜಿಕ್​ ನಂಬರ್​ 21 ಅನ್ನು ಬಿಜೆಪಿ ದಾಟಿದ್ದು, ಕಾಂಗ್ರೆಸ್​ ಕೂಡ ಸನಿಹದಲ್ಲೇ ಇದೆ.

ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಕೂಡ ಆರಂಭಿಕ ಮುನ್ನಡೆ ಕಂಡಿದ್ದಾರೆ. ಗೋವಾ ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಲ್‌ ಕೂಡ ಮುನ್ನಡೆ ಸಾಧಿಸಿದ್ದಾರೆ.ಒಟ್ಟು 40 ಕ್ಷೇತ್ರಕ್ಕೆ ಚುನಾವಣೆ ನಡೆದಿದೆ.

ಗೋವಾ ಬಿಜೆಪಿ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಗೋವಾ ಕಾಂಗ್ರೆಸ್​ ಉಸ್ತುವಾರಿಯಾಗಿ ಹಿರಿಯ ಮುಖಂಡ ದಿನೇಶ್​ ಗುಂಡೂರಾವ್​ ಕಾರ್ಯ ನಿರ್ವಹಿಸಿದ್ದರು.

Koo App
Today marks an important day. A day when the people of various states choose growth, development, secularity, peace and inclusivity, and not dynast and appeasement politics. @BJP4UP @bjp4uk @BJP4Goa @bjp4manipur-Dr. Murugesh R Nirani (@murugesh_nirani)10 Mar 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net