

ನವದೆಹಲಿ: ಕೊಡಗು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಮನೆಯಪಂಡ ಎ. ಗಣಪತಿ ನಾಗರಿಕ ವಿಮಾನಯಾನ ಭದ್ರತಾ (ಬಿಸಿಎಎಸ್) ವಿಭಾಗ ಮಹಾನಿರ್ದೇಶಕ (ಡಿಜಿ)ರಾಗಿ ನೇಮಕಗೊಂಡಿದ್ದಾರೆ. ಗಣಪತಿ ಅವರು 1986ರ ಉತ್ತರಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದ್ದರು.
1999ರಲ್ಲಿ ಸಿಬಿಐನಲ್ಲಿ ಸೇವೆ ಸಲ್ಲಿಸಿದ್ದರು. ಮೊರಾದಾಬಾದ್ನಗರ, ಬಾಂದ್ರಾ, ಹಾರ್ದೊಯ್ ಎಸ್ಪಿ, ಮೇರಠ್, ಕಾನ್ಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ದೆಹಲಿ ಭ್ರಷ್ಟಾಚಾರ ನಿಗ್ರಹದಳ ಡಿಐಜಿ ಆಗಿದ್ದರು. ಹರಿದ್ವಾರ ಐಜಿಪಿ, ಉತ್ತರಾಖಂಡ ಎಡಿಜಿಪಿ, ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ. 2002 ರಲ್ಲಿ ಪೊಲೀಸ್ ಪದಕ, 2010ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕವನ್ನು ಪಡೆದಿದ್ದಾರೆ. ಅವರು 2024, ಫೆಬ್ರವರಿ 29 ರಂದು ನಿವೃತ್ತಿಹೊಂದಲಿದ್ದು, ಅಲ್ಲಿಯವರೆಗೂ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.