ಕಾರಹುಣ್ಣಿಮೆ ಆಚರಣೆಯಲ್ಲಿ ಅವಘಡ: ರಾಸು ಹಾಯ್ದು ಯುವಕ ಸಾವು

death case
Published on

ಗದಗ: ಕಾರಹುಣ್ಣಿಮೆ ಸಂಭ್ರಮದ ವೇಳೆ ರಾಸು ಹಾಯ್ದು ಯುವಕನೊಬ್ಬ ಮೃತಪಟ್ಟ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಸಂಭವಿಸಿದೆ.

ಕಿರಣಕುಮಾರ್ ನರ್ತಿ ಮೃತ ದುದೈವಿ. ಉತ್ತರ ಕರ್ನಾಟಕ ಭಾಗದಲ್ಲಿ ಗುರುವಾರ ಕಾರಹುಣ್ಣಿಮೆ ಸಡಗರ ಕಳೆಗಟ್ಟಿತ್ತು. ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲೂ ಕಾರಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಕರಿ ಹರಿಯುವ ಕಾರ್ಯಕ್ರಮದಲ್ಲಿ ರಾಸುಗಳನ್ನು ಓಡಿಸುವಾಗ ಯುವಕ ಕಿರಣಕುಮಾರ್​ಗೆ ರಾಸು ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ನೆಲಕ್ಕುರುಳಿದ್ದ ಕಿರಣಕುಮಾರ್​ ಗಂಭೀರ ಗಾಯಗೊಂಡಿದ್ದ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net