ಸ್ವಾತಂತ್ರ್ಯ ಹೋರಾಟಗಾರ ವೆಂಕು ಸಾ ಬಾಂಡಗೆ ನಿಧನ

Venku Sa Bandage
Published on

ಗದಗ: ಹಿರಿಯ ಮುತ್ಸದ್ಧಿ, ಸ್ವಾತಂತ್ರ್ಯ ಹೋರಾಟಗಾರ ವೆಂಕು ಸಾ ಬಾಂಡಗೆ(105) ಅವರು ಸೋಮವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗಜೇಂದ್ರಗಡ ನಿವಾಸದಲ್ಲೇ ಕೊನೆಯುಸಿರೆಳೆದರು. ಇಂದು ಸಂಜೆ ಅಂತ್ರಕ್ರಿಯೆ ನಡೆಯಲಿದೆ.

18ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ವೆಂಕು ಸಾ ಬಾಂಡಗೆ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಗಾಂಧಿ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರು, ತಮ್ಮ ಜೀವಿತಾವಧಿಯ ಕೊನೇವರೆಗೂ ಗಾಂಧಿ ವಿಚಾರ ಪ್ರಚಾರದಲ್ಲಿ ತೊಡಗಿದ್ದರು. ಮಕ್ಕಳಿಗೆ ಗಾಂಧಿ ವಿಚಾರಧಾರೆಗಳ ಬಗ್ಗೆ ತಿಳಿಸುತ್ತಿದ್ದರು.

ರಾಮಾಯಣ ಹಾಗೂ ಮಹಾಭಾರತ ಬಗ್ಗೆಯೂ ಅತೀವ ಆಸಕ್ತಿ ಹೊಂದಿದ್ದ ವೆಂಕು ಸಾ ಬಾಂಡ ಅವರು ಮಹಾ ಗ್ರಂಥಗಳ ಬಗ್ಗೆ ಹಲುವು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net