ಶಾಲಾ ಬಸ್ಸಿನಲ್ಲೇ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಚಾಲಕ

girl
Published on

ಬಡ್ಡಿ: ನಾಲ್ಕು ವರ್ಷದ ಬಾಲಕಿಯೊಬ್ಬಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ, ಶಾಲಾ ಬಸ್ಸಿನಲ್ಲಿಯೇ ಚಾಲಕ ಆಕೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಹಿಮಾಚಲ ಪ್ರದೇಶದ ಬಡ್ಡಿ ನಗರದ ಬಳಿ ನಡೆದಿದೆ.

ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿರುವ ಬಾಲಕಿ ಶುಕ್ರವಾರ ಎಂದಿನಂತೆ ಶಾಲೆಗೆ ಶಾಲಾ ಬಸ್ಸಿನಲ್ಲಿ ತೆರಳಿದ್ದಾಳೆ. ಸಂಜೆ ಮನೆಗೆ ಬಂದ ಬಾಲಕಿ, ಮೂತ್ರ ವಿಸರ್ಜನೆ ಮಾಡುವುದಕ್ಕಾಗುತ್ತಿಲ್ಲ ಎಂದು ಚಿಕ್ಕಮ್ಮನಲ್ಲಿ ಹೇಳಿಕೊಂಡಿದೆ. ಏನಾಯಿತು ಎಂದು ಸರಿಯಾಗಿ ವಿಚಾರಿಸಿದಾಗ ಶಾಲಾ ಬಸ್ಸಿನ ಚಾಲಕ ಆಕೆಯ ಮೇಲೆ ಮಾಡಿದ ಕೃತ್ಯವನ್ನು ಬಾಲಕಿ ಹೇಳಿದ್ದಾಳೆ. ತತ್​ಕ್ಷಣವೇ ಬಾಲಕಿಯನ್ನು ಬಡ್ಡಿಯಲ್ಲಿರುವ ಆಸ್ಪತ್ರೆಗೆ ಸೇರಿಸಲಾಗಿದೆ.

ವೈದ್ಯರು ಬಾಲಕಿಯನ್ನು ಮೊದಲ ಹಂತದ ತಪಾಸಣೆ ಮಾಡಲಾಗಿದ್ದು ಅದರಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಧೃಡವಾಗಿದೆ. ಎರಡನೇ ಹಂತದ ತಪಾಸಣೆ ನಡೆದಿದ್ದು ಅದರ ವರದಿ ಬರಬೇಕಿದೆ.

ಬಾಲಕಿಯು ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಗಡಿಭಾಗದಲ್ಲಿರುವ ಪಂಚಕುಲ ಜಿಲ್ಲೆಯ ಪಿಂಜೋರೆ ಗ್ರಾಮದಲ್ಲಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ.

ಘಟನೆಯನ್ನು ತಿಳಿಯುತ್ತಿದ್ದಂತೆ ಸಹಾಯಕ ಪೊಲೀಸ್​ ಆಯುಕ್ತರಾಗಿರುವ ಸೂಪುರ್​ ಬಿಷ್ಣೋಯ್​ ಮತ್ತು ಸೆಕ್ಟರ್​ 19 ಅಪರಾಧ ಶಾಖಾ ತಂಡದ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net