ಮಾಜಿ ಶಾಸಕ ರಾಜಶೇಖರ ಗುರುಸಿದ್ದಪ್ಪ ಸಿಂಧೂರ ನಿಧನ

Rajasekhara Gurusiddappa Sindhura
Published on

ಹಾವೇರಿ: ಸವಣೂರ ಪಟ್ಟಣದ ಸಾಹುಕಾರ, ಮಾಜಿ ಶಾಸಕ ರಾಜಶೇಖರ ಗುರುಸಿದ್ದಪ್ಪ ಸಿಂಧೂರ(60) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

2004ರಲ್ಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ರಾಜಶೇಖರ ಸಿಂಧೂರ ಅವರು ಆಯ್ಕೆಯಾಗಿದ್ದರು. ಬಯಲುಸಿಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇಂದು ಬೆಳಗ್ಗೆ ಮಾಜಿ ಸವಣೂರಿನ ಸ್ವಗೃಹದಲ್ಲಿ ನಿಧನರಾದರು. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಸವಣೂರಿಗೆ ಆಗಮಿಸಿ ಸಂಜೆ 4ಕ್ಕೆ ಮೃತರ ಅಂತಿಮ ದರ್ಶನ ಪಡೆಯಲಿದ್ದಾರೆ. ಸಂಜೆ 5 ಗಂಟೆಗೆ ಬಂಕಾಪುರ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇಋರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ- ಓರ್ವ ಪುತ್ರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net