ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗೆ ದೂರುಗಳ ಸುರಿಮಳೆ

8-KGL-3,,,,,
ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ಬುಧವಾರ ಲೋಕಾಯುಕ್ತ ಇಸ್ಪೆಕ್ಟರ್ ಲೋಹಿತ್‌ಕುಮಾರ್ ಅವರ ಮುಂದೆ ದೂರುದಾರ ಧರ್ಮರಾಜು ಅಳಲು ತೋಡಿಕೊಂಡರು.
Published on

ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಚಾಮರಾಜನಗರ ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಹಿತ್‌ಕುಮಾರ್ ಬುಧವಾರ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು.

ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಪಟ್ಟಣದ ನಿವಾಸಿ ಧರ್ಮರಾಜು ಅವರು 2021ರಲ್ಲಿ ಕೆಂಪನಪಾಳ್ಯ ಗ್ರಾಮದ ಬಳಿ ಖಾಲಿ ನಿವೇಶನವನ್ನು ಖರೀಸಿದ್ದು, ಆ ನಿವೇಶನ ಆಸ್ತಿಗೆ ಸಂಬಂಧಿಸಿದಂತೆ ಚಕ್ಕುಬಂದಿ ತಪ್ಪಾಗಿದೆ. ಹಾಗಾಗಿ ಗ್ರಾಪಂ ಅಧಿಕಾರಿಗಳಿಗೆ ಹಾಗೂ ತಾ.ಪಂ ಅಧಿಕಾರಿಗಳಿಗೆ ಚಕ್ಕುಬಂದಿ ಸರಿಪಡಿಸಿಕೊಂಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡರು.

ಈ ವೇಳೆ ಸಭೆಯಲ್ಲಿದ್ದ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಮಾತನಾಡಿ, ಧರ್ಮರಾಜು ಅವರು ಖರೀದಿಸಿರುವ ನಿವೇಶನ ಬಡವರಿಗೆ ಸರ್ಕಾರ ನೀಡಿರುವ ನಿವೇಶನವಾಗಿದ್ದು ಇದನ್ನು ಖರೀದಿಸುವುದು ಮತ್ತು ಮಾರುವುದು ತಪ್ಪು. ಆದರೆ ಉಪ ನೋಂದ ಣಾಧಿಕಾರಿ ಅವರು ಸರ್ಕಾರಿ ನಿವೇಶನ ರಿಜಿಸ್ಟರ್ ಮಾಡುವಾಗ ಎರಡೂ ಕಡೆಯ ಪಾರ್ಟಿ ಬಂದರೆ ಸಾಕು ಕಣ್ಮುಚ್ಚಿ ಕೊಂಡು ರಿಜಿಸ್ಟರ್ ಮಾಡಿ ಬಿಡುತ್ತಾರೆ. ನಮ್ಮ ಗಮನಕ್ಕೂ ತರುವುದಿಲ್ಲ ಎಂದು ಅಸಮಾಧನ ಹೊರಹಾಕಿದರು. ಧರ್ಮರಾಜು ಅವರ ನಿವೇಶನ ವಿಚಾರವಾಗಿಯೂ ನೋಂದಣಾಧಿಕಾರಿಗೆ ನೋಟಿಸ್ ನೀಡಿದ್ದೇನೆ ಎಂದರು.

ಈ ವೇಳೆ ಸಭೆಯಲ್ಲಿದ್ದ ಉಪ ನೋಂದಣಾಧಿಕಾರಿ ರೇಖಾ ಮಾತನಾಡಿ, ಇಒ ಗುರುಶಾಂತಪ್ಪ ಬೆಳ್ಳುಂಗಡಿ ಅವರು ಕಣ್ಮುಚ್ಚಿ ಕೊಂಡು ರಿಜಿಸ್ಟರ್ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮ ಗಮನಕ್ಕೆ ತರುವುದಿಲ್ಲ ಎಂದು ಪದೇ ಪದೆ ಸಭೆಗಳಲ್ಲಿ ಹೇಳಿ ನಮಗೆ ನೋವುಂಟು ಮಾಡುತ್ತಿದ್ದಾರೆ. ನಮ್ಮ ಸಕ್ಯುಲರ್‌ನಲ್ಲಿ ನಿಮ್ಮ ಅನುಮತಿ ಪಡೆದು ರಿಜಿಸ್ಟರ್ ಮಾಡಬೇಕೆಂಬ ನಿಯಮವಿಲ್ಲ. ಆಗಂತ ನಾವು ಕಣ್ಮುಚ್ಚಿ ರಿಜಿಸ್ಟರ್ ಮಾಡುವುದೂ ಇಲ್ಲ ಎಂದು ಖಾರವಾಗಿ ಉತ್ತರಿಸಿದರು.

ಈ ವೇಳೆ ಗ್ರೇಡ್-2 ತಹಸೀಲ್ದಾರ್ ಕುಮಾರ್, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ನಗರಸಭೆ ಪೌರಾಯುಕ್ತರು ನಟರಾಜು, ಲೋಕಾಯುಕ್ತ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net