

ಜನಪ್ರಿಯ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ತನ್ನದೇ ಎಡವಟ್ಟಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಟ್ರೋಲ್ ಆಗಿದೆ. ಫ್ಲಿಪ್ಕಾರ್ಟ್ ಸಿಬ್ಬಂದಿಯೋರ್ವ ಗ್ರಾಹಕರ ಕಾಮೆಂಟ್ಗೆ ಬರೆದಿದ್ದ ಪ್ರತಿಕ್ರಿಯೆ ಎಲ್ಲರ ಹುಬ್ಬೇರಿಸಿದೆ. ಕೊನೆಗೆ ತಪ್ಪು ಅರ್ಥ ಮಾಡಿಕೊಂಡು ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ.
ಫ್ಲಿಪ್ಕಾರ್ಟ್ ಫೇಸ್ಬುಕ್ ಪೇಜ್ನಲ್ಲಿ ಗ್ರಾಹಕರೋರ್ವರು ಒಂದು ಪ್ರಶ್ನೆ ಕೇಳಿದ್ದರು. ನಿಮ್ಮ ಕಂಪನಿಯ ಸೇವೆ ನಾಗಾಲ್ಯಾಂಡ್ನಲ್ಲಿ ಏಕಿಲ್ಲ? ಇಲ್ಲಿ ಯಾವುದೇ ಡೆಲಿವರಿಯನ್ನೂ ಯಾಕೆ ನೀವು ನೀಡುವುದಿಲ್ಲ? ನಾವಿನ್ನೂ ಭಾರತದ ಅಂಗವಾಗಿಯೇ ಇದ್ದೇವೆ..ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಪತ್ನಿಯ ರಕ್ತಸಿಕ್ತ ರುಂಡ ಹಿಡಿದು ಪೊಲೀಸ್ ಠಾಣೆಗೆ ಹೋಗಿ ಶರಣಾದ ಭೂಪ…
ಅದಕ್ಕೆ ಫ್ಲಿಪ್ಕಾರ್ಟ್ ಅಕೌಂಟ್ನಿಂದ ಬಂದ ಪ್ರತಿಕ್ರಿಯೆ ಹೀಗಿತ್ತು...' ಕ್ಷಮಿಸಿ..ನಮ್ಮೊಂದಿಗೆ ಶಾಪಿಂಗ್ ಮಾಡಬೇಕು ಎಂಬ ನಿಮ್ಮ ಆಸಕ್ತಿಯನ್ನು ನಾವು ಪ್ರಶಂಸಿಸುತ್ತೇವೆ. ಆದರೆ ಮಾರಾಟಗಾರರು ಭಾರತದ ಹೊರಗಿನ ಪ್ರದೇಶಗಳಿಗೆ ಸೇವೆ ಒದಗಿಸುವುದಿಲ್ಲ'.
ನಾಗಾಲ್ಯಾಂಡ್ ಭಾರತದಲ್ಲಿಲ್ಲ ಎಂದು ಭಾವಿಸಿದ ಫ್ಲಿಪ್ಕಾರ್ಟ್ನ್ನು ನೆಟ್ಟಿಗರು ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ನಂತರ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಫ್ಲಿಪ್ಕಾರ್ಟ್, ಅಜಾಗರೂಕತೆಯಿಂದ ತಪ್ಪಾಗಿದೆ. ನಾಗಾಲ್ಯಾಂಡ್ ಸೇರಿ ರಾಷ್ಟ್ರದ ಎಲ್ಲ ಕಡೆಗಳಲ್ಲೂ ನಮ್ಮ ಸೇವೆಯನ್ನು ಸರಿಯಾಗಿ ಒದಗಿಸುತ್ತಿರುವ ಬಗ್ಗೆ ಇನ್ನೊಮ್ಮೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಸ್ಪಷ್ಟನಾ ಕಾಮೆಂಟ್ ಬರೆದಿದೆ. ಆದರೆ ಅಷ್ಟರಲ್ಲಾಗಲೇ ಫ್ಲಿಪ್ಕಾರ್ಟ್ನ್ನು ಅನೇಕರು ಆಡಿಕೊಂಡು ನಕ್ಕಿದ್ದಾರೆ.