VIDEO: ಲಿಫ್ಟ್​ನಲ್ಲಿ ಮಕ್ಕಳನ್ನು ಆಟವಾಡಲು ಬಿಡುತ್ತೀರಾ? ಈ ವಿಡಿಯೋ ನೋಡಿದ ಮೇಲೆ ನೀವೇ ನಿರ್ಧರಿಸಿ

ಅಗ್ತಸರಯಡ
Published on

ಮುಂಬೈ: ಲಿಫ್ಟ್​, ಎಸ್ಕಲೇಟರ್​ಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತವೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಅದರಲ್ಲೂ ಪುಟ್ಟ ಮಕ್ಕಳಿರುವ ಕುಟುಂಬ ಲಿಫ್ಟ್​ ಬಳಸುವಾಗ ಎಷ್ಟೇ ಜಾಗೃತವಾಗಿದ್ದರೂ ಸಾಲದು. ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ.

ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ ಫ್ಲೋರ್​ಗೆ ಹೊರಟಿದ್ದಾರೆ. ಗ್ರೌಂಡ್​ ಫ್ಲೋರ್​ನಲ್ಲಿ ಲಿಫ್ಟ್​ ಹತ್ತಿದ ಅವರು, ನಾಲ್ಕನೇ ಫ್ಲೋರ್​ನಲ್ಲಿ ಒಬ್ಬೊಬ್ಬರಾಗಿ ಲಿಫ್ಟ್​ನಿಂದ ಹೊರಬಂದಿದ್ದಾರೆ. ಇಬ್ಬರು ಮಕ್ಕಳು ಬಂದ ನಂತರ, ಐದು ವರ್ಷದ ಬಾಲಕ ಹೊರಬರಲು ಮುಂದಾಗಿದ್ದಾನೆ. ಲಿಫ್ಟ್​ನ ಮೊದಲನೇ ಬಾಗಿಲನ್ನು ಯುವಕ ದಾಟುತ್ತಿದ್ದಂತೆ ಕಬ್ಬಿಣದ ಸರಳಿದ್ದ ಬಾಗಿಲು ಮತ್ತು ಮರದ ಬಾಗಿಲು ಎರಡೂ ಮುಚ್ಚಿದೆ. ಎರಡೂ ಬಾಗಿಲ ಮಧ್ಯದಲ್ಲಿ ಬಾಲಕ ಸಿಲುಕಿಕೊಂಡಿದ್ದಾನೆ. ಬಾಗಿಲು ಮುಚ್ಚುತ್ತಿದ್ದಂತೆ ಲಿಫ್ಟ್​ ಚಲಿಸಲು ಆರಂಭವಾಗಿದೆ.

ಆ ಮಗು ಲಿಫ್ಟ್​ಗೆ ಸಿಕ್ಕಿದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

ಲಿಫ್ಟ್​ನ ಬಾಗಿಲ ಮಧ್ಯೆ ಸಿಲುಕಿ ಬಾಲಕ ಪ್ರಾಣ ಕಳೆದುಕೊಂಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net