ಹಾವೇರಿ ಆಸ್ಪತ್ರೆಯಲ್ಲಿ ಧಗಧಗಿಸಿದ ಬೆಂಕಿ: ಹಸುಗೂಸನ್ನು ಬಿಗಿದಪ್ಪಿ ಚೀರಾಡುತ್ತಾ ಓಡಿದ ಬಾಣಂತಿಯರು

haveri hospital
Published on

ಹಾವೇರಿ: ಹಸುಗೂಸನ್ನು ಬಿಗಿದಪ್ಪಿಕೊಂಡು ಚೀರಾಡುತ್ತಾ ಬಾಣಂತಿಯರು ಓಡೋಡಿ ಬರುತ್ತಿದ್ದರೆ, ಗರ್ಭಿಣಿಯರು ಜೀವಭಯದಲ್ಲೇ ವೇಗವಾಗಿ ಹೆಜ್ಜೆಯನ್ನಿಟ್ಟು ಬರುತ್ತಲೇ ಕೈ ಬೀಸಿ ಸಹಾಯ ಕೋರುತ್ತಿದ್ದ ದೃಶ್ಯ ಹಾವೇರಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಕಂಡುಬಂತು.

ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಹೆರಿಗೆ ವಾರ್ಡ್​ ಹೊತ್ತಿ ಉರಿದಿದೆ. ಹಸು ಗೂಸುಗಳನ್ನು ಎತ್ತುಕೊಂಡು ಹೊರ ಓಡಿ ಬಂದ ಬಾಣಂತಿಯರು, ಗರ್ಭಿಣಿಯರು ನಿಟ್ಟುಸಿರುಬಿಟ್ಟರು.

ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಯ ಮುಂಭಾಗವೇ ನೂರಕ್ಕೂ ಹೆಚ್ಚು ಬಾಣಂತಿಯರು ಕೂತು ಕಣ್ಣೀರಿಟ್ಟರು. ಸೂಕ್ತ ವ್ಯವಸ್ಥೆ ಇಲ್ಲದೆ ಆಸ್ಪತ್ರೆ ಆವರಣದಲ್ಲೇ ಕೆಲಕಾಲ ಬಾಣಂತಿಯರು ಮಲಗಿದರು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net