

ವಿಜಯಪುರ: ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ ಸ್ಯಾಂಡಲ್ವುಡ್ನ ಮಾದಕ ನಟಿ ರಾಧಿಕಾ ದ್ವಿವೇದಿ. ಅದರ ಮುಂದುವರಿದ ಭಾಗವಾಗಿ ವಿಜಯಪುರದಲ್ಲಿ ಬುಧವಾರ ಬಡವರಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ವೇಳೆ ಡ್ರಗ್ಸ್ ಕೇಸ್ನಲ್ಲಿ ನನ್ನನ್ನು ಟಾರ್ಗೆಟ್ ಮಾಡಿಯೇ ಸಿಲುಕಿಸಲಾಯಿತು ಎಂದಿದ್ದಾರೆ.
ಡ್ರಗ್ಸ್ ಕೇಸ್ ಬಗ್ಗೆ ಹೆಚ್ಚು ಮಾತಾಡೋದಿಲ್ಲ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ನಾವು ತಪ್ಪು ಮಾಡಿಲ್ಲಾ ಅಂದ್ರೆ ಟೆನ್ಷನ್ ಮಾಡಿಕೊಳ್ಳಬಾರದು. ಡ್ರಗ್ಸ್ ವಿಚಾರದಲ್ಲಿ ಶೇ.100 ಟಾರ್ಗೆಟ್ ಮಾಡಲಾಗಿದೆ. ಬರೀ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ. ಪ್ರತಿ ವಿಚಾರದಲ್ಲೂ ಹೆಣ್ಮಕ್ಕಳನ್ನು ತುಂಬಾ ಸುಲಭವಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ ಎಂದು ರಾಗಿಣಿ ಅಸಮಾಧಾನ ಹೊರಹಾಕಿದರು.
ಡ್ರಗ್ಸ್ ಕೇಸ್ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿಕೆಗೆ ಪ್ರತಿಕ್ರಿಯಸಿದ ರಾಗಿಣಿ, ಬ್ಲೇಮ್ ಮಾಡೋ ಬದಲು ಎಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ಕರೆಕ್ಟ್ ಆಗಿದ್ರೆ ಸಾಕು. ಅವರು ನಿಜವಾಗಿಯೂ ನನಗೆ ಪರಿಚಯವಿಲ್ಲ, ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ. ಅವರವರ ಒಪೀನಿಯನ್ ಮಾತಾಡ್ತಾರೆ, ಅದನ್ನು ನಾನು ಕಂಟ್ರೋಲ್ ಮಾಡಲು ಆಗಲ್ಲ. ನಾನು ಏನು ಮಾಡ್ತೀನಿ, ಏನು ಮಾತಾಡ್ತೀನಿ ಅನ್ನೋದನ್ನು ಮಾತ್ರ ಕಂಟ್ರೋಲ್ ಮಾಡ್ತೀನಿ ಎಂದರು.
ನನ್ನನ್ನು ಎಲ್ಲರೂ ಇಷ್ಟ ಪಡ್ತಾರೆ, ನನಗೆ ಫ್ಯಾನ್ಸ್ ಇದ್ದಾರೆ, ಅವರಿಗೆಲ್ಲ ಧನ್ಯವಾದ ಹೇಳ್ತೇನೆ. ನನ್ನನ್ನು ಇಷ್ಟಪಟ್ಟವರಿಗೂ, ಇಷ್ಟ ಪಡದವರಿಗೂ ಥ್ಯಾಂಕ್ಯೂ... ಎಂದು ಹೇಳಿದರು ರಾಗಿಣಿ.