ಶಿವಸೇನೆ ಪಕ್ಷದ ಚಿಹ್ನೆಗಾಗಿ ಶಿಂಧೆ ಡಿಮಾಂಡ್​! ಬಾಳಾ ಸಾಹೇಬ್​ ಠಾಕ್ರೆ ಕಟ್ಟಿದ್ದ ಪಕ್ಷವೇ ಹೈಜಾಕ್​

eknath Shinde
Published on

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಸಚಿವ ಏಕನಾಥ್​ ಶಿಂಧೆ ನಡೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ರೆಸಾರ್ಟ್​ನಲ್ಲಿರುವ ಬಂಡಾಯ ಶಾಸಕರು ಉದ್ಧವ್​ ಠಾಕ್ರೆ ವಿರುದ್ಧ ಬಲಪ್ರದರ್ಶನ ತೋರಿಸಿದ್ದಾರೆ. ಠಾಕ್ರೆ ಕರೆದ ಸಭೆಗೂ ಗೈರಾಗಿದ್ದಾರೆ. ಉದ್ಧವ್​ ಠಾಕ್ರೆ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಏಕನಾಥ್​ ಶಿಂಧೆ ಮಹತ್ತರವಾದ ಡಿಮಾಂಡ್​ ಇಟ್ಟಿದ್ದಾರೆ.

ಶಿವಸೇನೆ ಪಕ್ಷದ ಚಿಹ್ನೆಯನ್ನೇ ಏಕನಾಥ್​ ಶಿಂಧೆ ಕೇಳಿದ್ದಾರೆ. ಆ ಮೂಲಕ ಬಾಳಾ ಸಾಹೇಬ್​ ಠಾಕ್ರೆ ಕಟ್ಟಿದ್ದ ಪಕ್ಷವನ್ನೇ ಹೈಜಾಕ್​ ಮಾಡಲಾಗುತ್ತಿದೆ. ಶಿವಸೇನೆ ಪಕ್ಷದ 56 ಶಾಸಕರಿದ್ದಾರೆ. ಈ ಪೈಕಿ ಶಿಂಧೆ ಬಳಿ 42 ಶಾಸಕರಿದ್ದಾರೆ. ಠಾಕ್ರೆ ಬಳಿ 14 ಶಾಸಕರಿದ್ದಾರೆ.

ಮಹಾ ಆಘಾಡಿ ಸರ್ಕಾರದಿಂದ ಹೊರ ಬರುವ ಹಾಗೂ ಉದ್ಧವ್​ ಠಾಕ್ರೆಯ ನಾಯಕತ್ವ ವಿರೋಧಿಸಿ ಶಿಂಧೆ ಬಂಡಾಯ ಎದ್ದಿದ್ದು, ಬೈ ಎಲೆಕ್ಷನ್​ಗೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ. ಶಿಂಧೆ ತಂಡ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಇದೀಗ ಶಿಂಧೆ ಅವರು ನಮ್ಮ ಕಡೆ ಹೆಚ್ಚಿನ ಶಾಸಕರಿದ್ದಾರೆ. ಹಾಗಾಗಿ ಶಿವಸೇನೆ ಪಕ್ಷದ ಚಿಹ್ನೆಯನ್ನ ನಮಗೇ ಕೊಡಬೇಕು ಎಂದು ಡಿಮಾಂಡ್​ ಮಾಡ್ತಿದ್ದಾರೆ.

ಮೈತ್ರಿ ಬಗ್ಗೆ ಸಿಎಂ ಉದ್ಧವ್​ ಠಾಕ್ರೆ ಜತೆ ನಾವು ಚರ್ಚಿಸೋಣ. 24 ತಾಸಿನೊಳಗೆ ಮಾತುಕತೆಗೆ ಬನ್ನಿ ಎಂದು ಬಂಡಾಯ ಶಾಸಕರಿಗೆ ಸಂಜಯ್​ ರಾವತ್​ ಆಹ್ವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net