ಮಾತು ಬಾರದಿದ್ದರೇನು, ಭಾವ ಇದೆಯಲ್ಲ ! ನಾಯಿ ಮುದ್ದಾಗಿ ಕ್ಷಮೆ ಕೇಳುವ ಈ ವಿಡಿಯೋ ಮಿಸ್​ ಮಾಡ್ಕೋಬೇಡಿ...

Shwana
Published on

ಅದೆಷ್ಟೋ ಜನರು ನಾಯಿ, ಬೆಕ್ಕುಗಳನ್ನು ತಮ್ಮ ಮನೆ ಮಕ್ಕಳಂತೆ ಸಾಕುತ್ತಾರೆ. ಅವೂ ಕೂಡ ತಮ್ಮನ್ನು ಸಾಕಿದ ಮಾಲೀಕರಿಗೆ ತುಂಬ ವಿಧೇಯವಾಗಿ ಇರುತ್ತವೆ. ಪ್ರೀತಿಸುತ್ತವೆ...

ಅದರಲ್ಲೂ ನಾಯಿಗಳು ಮನುಷ್ಯರ ಭಾವನೆಗಳನ್ನು ತುಂಬ ಬೇಗ ಅರ್ಥ ಮಾಡಿಕೊಳ್ಳಬಲ್ಲವು. ತಮ್ಮನ್ನು ಪ್ರೀತಿಸುವವರಿಗೆ ಅಷ್ಟೇ ಪ್ರೀತಿಯನ್ನು ತಿರುಗಿ ಕೊಡುತ್ತವೆ. ಮಾಲೀಕನ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತವೆ. ಯಾವುದೇ ಒಂದು ಅಪಾಯವಾದರೂ ಎಚ್ಚರಿಸುತ್ತವೆ. ನಾಯಿಗಳ ಬುದ್ಧಿವಂತಿಕೆ, ನಿಷ್ಠೆಯನ್ನು ತೋರುವ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ.

ಸಾಕು ನಾಯಿಗಳು ಮನುಷ್ಯರ ಹಾವಭಾವಗಳನ್ನು ತಾವೂ ಮಾಡಲು ಪ್ರಯತ್ನಿಸುತ್ತವೆ. ಸಾಕಿದವರು ಹೇಳಿಕೊಡುವ ಶಿಸ್ತನ್ನು ಪಾಲಿಸುತ್ತವೆ.

ಈಗ ಇಲ್ಲೊಂದು ಬಿಳಿ ನಾಯಿ...ತನ್ನ ಸಹೋದರ ಕೆಂಪು ನಾಯಿಯ ಬಳಿ ತುಂಬ ಮುದ್ದಾಗಿ ಕ್ಷಮೆ ಕೇಳುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಥೇಟ್​ ಮನುಷ್ಯರಂತೆಯೇ ಸ್ವಾರಿ ಕೇಳಿದೆ.

ಹ್ಯೂಮರ್​​ ಆ್ಯಂಡ್​ ಎನಿಮಲ್ಸ್​ ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಪೋಸ್ಟ್​ ಮಾಡಲಾದ ವಿಡಿಯೋ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ವೈಭವದ ಹುಟ್ಟುಹಬ್ಬ ಬೇಡ … ಅಭಿಮಾನಿಗಳಿಗೆ ಗಣೇಶ್​ ಮನವಿ

ಇದರಲ್ಲಿ ಬಿಳಿ ನಾಯಿಯ ಹೆಸರು ವಾಟ್ಸನ್​. ಕೆಂಪು ನಾಯಿಯ ಹೆಸರು ಕಿಕೋ. ಇವಿಬ್ಬರೂ ಸಹೋದರರು. ಅದರಲ್ಲಿ ತುಂಟ ಬಿಳಿ ನಾಯಿ ಕಿಕೋಕ್ಕೆ ಇಡಲಾಗಿದ್ದ ತಿಂಡಿಯನ್ನೂ ಕದ್ದು ತಿಂದಿರುತ್ತದೆ. ಹಾಗಾಗಿ ಆ ನಾಯಿಗಳನ್ನು ಸಾಕಿದ ಮಹಿಳೆ ಅದಕ್ಕೆ ಬೈಯುತ್ತಾರೆ. ನಿನ್ನ ಸಹೋದರನ ಬಳಿ ಕ್ಷಮೆ ಕೇಳು ಎನ್ನುತ್ತಾರೆ.

ಆಗ ವಾಟ್ಸನ್​ ನಾಯಿ ಕಿಕೋದ ಬಳಿ ತೆರಳುತ್ತದೆ. ತನ್ನ ಮುಂದಿನ ಎರಡೂ ಕಾಲುಗಳನ್ನು ಎತ್ತಿ, ಕಿಕೋ ನಾಯಿಯ ಕುತ್ತಿಗೆಯನ್ನು ತಬ್ಬಿ ಹಿಡಿದು ಕ್ಷಮೆ ಯಾಚಿಸುತ್ತದೆ. ಇದನ್ನೂ ಓದಿ: video/ ರೈಲ್ವೆ ಬ್ಯಾರಿಕೇಡ್​ಗೆ ಹೊಟ್ಟೆ ಸಿಲುಕಿಸಿಕೊಂಡು ಒದ್ದಾಡಿದ ಆನೆ

ವಿಡಿಯೋ ನೋಡಿದ ನೆಟ್ಟಿಗರಂತೂ ಫುಲ್​ ಖುಷಿಯಾಗಿದ್ದಾರೆ. ಅಬ್ಬಾ..ಎಷ್ಟು ಮುದ್ದಾಗಿ ಕ್ಷಮೆ ಕೇಳುತ್ತಿದೆ ಎಂದು ಬಿಳಿ ನಾಯಿಯನ್ನು ಹೊಗಳಿದ್ದಾರೆ. ಅಂಥ ಸಭ್ಯ ನಡವಳಿಕೆಗಳನ್ನು ಕಳಿಸಿದ ಮಹಿಳೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net