ಪಂಚಾಯ್ತಿಯಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆಗೈದ ಡಿಎಂಕೆ ನಾಯಕ!?| DMK

Arrest
Published on

DMK : ಪಂಚಾಯ್ತಿಯಲ್ಲಿನ ಅಕ್ರಮಗಳನ್ನು ಎತ್ತಿ ತೋರಿಸಿದ ಕಾರಣಕ್ಕಾಗಿ ಗ್ರಾಮದ ವ್ಯಕ್ತಿಯೊಬ್ಬನನ್ನು ಕೊಲೆಗೈದ ಆರೋಪದ ಮೇಲೆ ಡಿಎಂಕೆಯ ಪಂಚಾಯತ್ ಅಧ್ಯಕ್ಷ ವಿನಯಾಗಂ ಪಳನಿಸ್ವಾಮಿ ಎಂಬುವವರನ್ನು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಪೊಲೀಸರು ಗುರುವಾರ (ಸೆಪ್ಟೆಂಬರ್​ 11) ಬಂಧಿಸಿದ್ದಾರೆ.

ಪಳನಿಸ್ವಾಮಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ವೇಳೆ, ಪಂಚಾಯತ್​ ಅಧ್ಯಕ್ಷ ತನ್ನ ಕಾರಿನಲ್ಲಿ ಆತನ ಮೇಲೆ ಹರಿಸಿ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಮೊದಲು ಅಧಿಕಾರಿಗಳು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರಿಂದ ಹಿಟ್​ ಎಂಡ್​ ರನ್​ ಎಂದು ಕೇಸು ದಾಖಲಿಸಲಾಗಿತ್ತು. ಆದರೆ, ಮೃತರ ಕುಟುಂಬವು ಪಳನಿಸ್ವಾಮಿ ಹಾಗೂ ಪಂಚಾಯತ್​ ಮುಖ್ಯಸ್ಥರೊಂದಿಗೆ ಸಮಸ್ಯೆಗಳಿರುವುದನ್ನು ಅಧಿಕಾರಿಗಳಿಗೆ ತಿಳಿಸಿದ್ದು, ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದರು. ಈ ನಂತರ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಆರಂಭಿಸಿದ್ದರು.

ಈ ಮೊದಲು ಬಲಿಪಶು ಪಹಳಸ್ವಾಮಿ ಖಾಸಗಿ ರಸ್ತೆಯನ್ನು ಪಂಚಾಯತ್‌ಗೆ ಹಸ್ತಾಂತರಿಸದಿರುವ ಬಗ್ಗೆ ದೂರು ನೀಡಿದ್ದರು. ಈ ವೇಳೆ ಪಂಚಾಯತ್​ ಅಧ್ಯಕ್ಷರಿಗೂ ಬಲಿಪಶು ನಡುವೆ ಜಗಳ ಸಂಭವಿಸಿತ್ತು. ಇನ್ನು ಹಲವಾರು ಸಮಸ್ಯೆಗಳನ್ನು ಎತ್ತಿ ತೋರಿಸಿರುವುದು ಕೊಲೆಗೆ ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಎನ್​ಡಿಟಿವಿಗೆ ತಿಳಿಸಿದ್ದಾರೆ.

ಇನ್ನು ಪಂಚಾಯತ್​ ಅಧ್ಯಕ್ಷನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಆಡಳಿತಾರೂಢ ಡಿಎಂಕೆ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ಸಮಯದಲ್ಲೇ ಈ ಘಟನೆ ಸಂಭವಿಸಿದೆ. ಆದರೆ, ಆಡಳಿತ ಪಕ್ಷ ಮತ್ತು ರಾಜ್ಯ ಪೊಲೀಸರು ಈ ಆರೋಪಗಳನ್ನು ನಿರ್ಲಕ್ಷಿಸಿದ್ದಾವೆ. ಇನ್ನು ರಾಜ್ಯದಲ್ಲಿ ಯಾವುದೇ ಅಪರಾಧಗಳು ಕಂಡು ಬಂದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net