ತಂದೆಯಿಂದಲೇ ಹೇಯ ಕೃತ್ಯ: 10 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ! | Daughter

Untitled design (93)
Published on

10ವರ್ಷದ ಬಾಲಕಿ ಮೇಲೆ ತನ್ನ ತಂದೆಯೇ ಕುಡಿದ ಮತ್ತಿನಲ್ಲಿ ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮರಿಕಲ್​ ಮಂಡಲದ ವ್ಯಾಪ್ತಿಯ ಹಳ್ಳಿಯೊಂದಲ್ಲಿ ನಡೆದಿದೆ.

ಈ ಘಟನೆ ಜುಲೈ 25 ರಂದು ನಡೆದಿದ್ದು, ಮಗುವನ್ನು ಚಿಕಿತ್ಸೆಗಾಗಿ ಮಹಬೂಬ್‌ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ನಂತರವೇ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಬಾಲಕಿ, ನಾಯಿ ಕಡಿತದ ಘಟನೆಯ ನಂತರ ಇತ್ತೀಚೆಗೆ ಮಕ್ತಲ್‌ನಲ್ಲಿರುವ ಸರ್ಕಾರಿ ಹಾಸ್ಟೆಲ್‌ನಿಂದ ಮನೆಗೆ ಮರಳಿದ್ದಳು. ಆಕೆಯ ತಾಯಿ ದಿನಗೂಲಿ ಕೆಲಸಕ್ಕೆ ಹೊರಗೆ ಹೋದಾಗ, ಮನೆಯಲ್ಲಿ ಬಾಲಕಿ ಮೇಲೆ ಕುಡಿದ ಮತ್ತಿನಲ್ಲಿ ತಂದೆ ಅತ್ಯಾಚಾರ ಮಾಡಿದ್ದಾನೆ. ಮಗು ಬೇಡ ಅಪ್ಪ.. ಎಂದರೂ ಪಾಪಿ ತಂದೆ ಬಿಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಮಗು ಚಿರಿದಾಗ ಅಕ್ಕಪಕ್ಕದ ಮನೆಯರು ಓಡಿಬಂದು ಮಗುವನ್ನು ಕಾಪಾಡಿದ್ದಾರೆ. ಆಕೆಯ ತಾಯಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ವಿರುದ್ಧ ದೂರು ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net