ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ನೀಲಿ ಚಿತ್ರಗಳ ತಾರೆ ಡೇಲಿಯಾ ಸ್ಕೈ ಆತ್ಮಹತ್ಯೆ!

deliya sky
Published on

ವಾಷಿಂಗ್ಟನ್​: ಅಮೆರಿಕಾದ ಖ್ಯಾತ ಪೋರ್ನ್​(ನೀಲಿ) ಚಿತ್ರಗಳ ತಾರೆ ಡೇಲಿಯಾ ಸ್ಕೈ ತನ್ನ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಸತ್ತಿದ್ದಾಳೆ.

ಇನ್ನೊಂದು ತಿಂಗಳಲ್ಲಿ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಪೋರ್ನ್​ ನಟಿ ಕಳೆದ ಜೂನ್​ 30ರಂದು ಲಾಸ್​ ಏಂಜಲಿಸ್​ನ ಸ್ಯಾನ್​ ಫರ್ನಾಂಡೊ ಕಣಿವೆಯ ಡೆವನ್​ಶೈರ್​ ಪ್ರವದೇಶದಲ್ಲಿ ತನ್ನ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ.

2010ರಲ್ಲಿ ಬೈಲಿ ಬ್ಲೂ ಹೆಸರಿನಲ್ಲಿ ವಯಸ್ಕರ ಮನರಂಜನಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಬೈಲಿ ಬ್ಲೂ ಎಂದೇ ಹೆಸರು ಪಡೆದಿದ್ದಳು. ಆದರೆ ಈ ಹೆಸರು ತನ್ನ ಕಂಪನಿಯ ಟ್ರೇಡ್​ ಮಾರ್ಕ್​ ಎಂದು ಬಟ್ಟೆ ಕಂಪನಿಯೊಂದು ಸ್ಕೈಗೆ ನೋಟಿಸ್​ ಕಳುಹಿಸಿದ್ದ ಬಳಿಕ ಆಕೆ ಆ ಹೆಸರನ್ನು ಕೈಬಿಟ್ಟಿದ್ದಳು.

ಕಾರಿನಲ್ಲೇ ವಾಸವಿದ್ದ ಆಕೆ ಅದೇ ಕಾರಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾಳೆ. ಇತ್ತೀಚಿಗೆ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಡೇಲಿಯಾ ಸ್ಕೈ, ಮಾನಸಿಕ ಖಿನ್ನತೆಗೂ ಒಳಗಾಗಿದ್ದಳು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net