ಎಟಿಎಂನಲ್ಲಿ ಸಿಕ್ಕ ಹಣ ಬ್ಯಾಂಕಿಗೆ ಹಿಂದಿರುಗಿಸಿದ ಗ್ರಾಹಕ

atm
ನಗರ ಎಟಿಎಂನಲ್ಲಿ ಗ್ರಾಹಕ ಬಿಟ್ಟುಹೋದ ಹಣವನ್ನು ವಿಠೋಬ ಅವರು ಬ್ಯಾಂಕ್‌ಗೆ ಹಿಂದಿರುಗಿಸಿದರು. ಮ್ಯಾನೇಜರ್ ಸ್ಮಿತಾ ಐತಾಳ್ ಇದ್ದರು.
Published on

ಹೊಸನಗರ: ನಗರ ಎಟಿಎಂನಲ್ಲಿ ಗ್ರಾಹಕರು ಬಿಟ್ಟುಹೋದ ಹಣವನ್ನು ವ್ಯಕ್ತಿಯೊಬ್ಬ ಬ್ಯಾಂಕ್‌ಗೆ ವಾಪಸ್ ಮಾಡಿದ್ದಾರೆ. ಚಿಕ್ಕಪೇಟೆ ನಿವಾಸಿ ವಿಠೋಬ ಎಂಬುವರು ನಗರ ಕೆನರಾ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಆದರೆ ಆಗಲೇ ಎಟಿಎಂನಲ್ಲಿ 3 ಸಾವಿರ ರೂ. ಹೊರಬಂದಿತ್ತು. ಅಂದು ಪಕ್ಕದ ಬ್ಯಾಂಕ್ ಕೂಡ ರಜೆ ಇತ್ತು. 3 ಸಾವಿರ ರೂ. ತೆಗೆದುಕೊಂಡು ಸೋಮವಾರ ಬ್ಯಾಂಕ್ ತೆರೆಯುತ್ತಿದ್ದಂತೆ ಹಣವನ್ನು ಹಿಂದಿರುಗಿಸಿದರು. ಶಾಖಾ ಪ್ರಬಂಧಕರಾದ ಸ್ಮಿತಾ ಐತಾಳ್, ಎಟಿಎಂನಲ್ಲಿ ಹಣ ಬಿಟ್ಟುಹೋದ ಖಾತೆದಾರರನ್ನು ಪತ್ತೆಹಚ್ಚಿ ಅವರಿಗೆ ಹಿಂದಿರುಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಸಿಕ್ಕ ಹಣವನ್ನು ಬ್ಯಾಂಕ್‌ಗೆ ಒಪ್ಪಿಸಿದ ಗ್ರಾಹಕ ವಿಠೋಬರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಬ್ಯಾಂಕ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net