ನೇರಳಕೊಡಿಗೆಯಲ್ಲಿ ಜರಿದ ಗುಡ್ಡ

neralakudige road
ನೇರಳಕೊಡಿಗೆ ರಸ್ತೆ ಬಿರುಕು ಬಿಟ್ಟಿರುವುದು.
Published on

ಶೃಂಗೇರಿ: ತಾಲೂಕಿನಲ್ಲಿ ಮಂಗಳವಾರ ಮಳೆ ಕೊಂಚ ಬಿಡುವು ನೀಡಿದ್ದರೂ ತುಂಗಾನದಿಯ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಆನೆಗುಂದ ರಾಷ್ಟ್ರೀಯ ಹೆದ್ದಾರಿ-169ರ ಸಮೀಪ ಹಾಗೂ ನೇರಳಕೊಡಿಗೆಯಲ್ಲಿ ಭೂಕುಸಿತವಾಗಿದೆ.

ಮಳೆ ಲೆಕ್ಕಿಸದೆ ಮಂಗಳವಾರ ಕೋಲಾರ, ಬೆಂಗಳೂರು, ಮೈಸೂರು, ತುಮಕೂರು ಕಡೆಯಿಂದ ಬಂದ ಪ್ರವಾಸಿ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಮಠದ ಎಲ್ಲ ದೇವಾಲಯಗಳಿಗೆ ಹೋಗಿ ಜಗದ್ಗುರುಗಳ ಆಶೀರ್ವಾದ ಪಡೆದು ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳಿಗೆ ಮಹಿಳೆಯರು ಕಾದು ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶೃಂಗೇರಿ ಕ್ಷೇತ್ರದಿಂದ ಹೊರನಾಡು, ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠ, ಉಡುಪಿ ಶ್ರೀಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ಮತ್ತಿತರ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಾಗಿ ಸರ್ಕಾರಿ ಬಸ್‌ಗಳಲ್ಲೇ ತೆರಳುತ್ತಿದ್ದಾರೆ.
ಶೃಂಗೇರಿ ಮಠದಲ್ಲಿ ವಾಸ್ತವ್ಯ ಹಾಗೂ ಭೋಜನ ವ್ಯವಸ್ಥೆ ಕೂಡಾ ಇದ್ದು ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net