

ಹಾವೇರಿ: ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವ ಹಾಗೆ, ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹೊಸ ವೀರಾಪುರದಲ್ಲಿ ಗ್ರಾಮಸ್ಥರು ಹಸುವಿಗೆ ಸೀಮಂತ ಮಾಡಿದ್ದಾರೆ.
ಗ್ರಾಮದ ನವೀನ ಹುಣಸಿಹಳ್ಳಿ ಎಂಬ ರೈತನ ಮನೆಯಲ್ಲಿ ಈ ವಿಶೇಷ ಕಾರ್ಯ ಮಾಡಲಾಗಿದೆ. ಹಸುವಿಗೆ ಸೀರೆ ಉಡಿಸಿ ಹೂವು ಮುಡಿಸಿ, ಅದಕ್ಕೆ ಅಕ್ಕಪಕ್ಕದ ಒಂಭತ್ತು ಜನರ ಮುತ್ತೈದೆಯರನ್ನು ಕರೆಸಿ ಉಡಿ ತುಂಬಿಸಲಾಯಿತು. ನಂತರ ಐದು ಥರದ ಹಣ್ಣುಗಳನ್ನಿಟ್ಟು ಇಷ್ಟದ ಸಿಹಿ ತಿನಿಸುಗಳನ್ನು ನೀಡಿ ಸೀಮಂತ ಕಾರ್ಯ ಮಾಡಲಾಯಿತು. ಗ್ರಾಮಸ್ಥರೆಲ್ಲಾ ರೈತ ನವೀನ್ ಮನೆಗೆ ಆಗಮಿಸಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.