ಮನೆ ಬಿಟ್ಟು ಬಂದ ಪ್ರೇಮಿಗಳ ಮದುವೆಗೆ ಲಖನೌ ಮಹಿಳಾ ಪೊಲೀಸರ ಪೌರೋಹಿತ್ಯ!

POLICE MADUVE
Published on

ಲಖನೌ: ಮನೆ ಬಿಟ್ಟು ಬಂದ ಪ್ರೇಮಿಗಳಿಗೆ ಮಹಿಳಾ ಪೊಲೀಸರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.

ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಹುಡುಗಿ ಮನೆ ಕಡೆಯವರು ಒಪ್ಪಿರಲಿಲ್ಲ. ಹೀಗಾಗಿ ಪ್ರೇಮಿಗಳು ಪೊಲೀಸರ ಮೊರೆ ಹೋಗಿದ್ದರು. ಲಖನೌ ಮಹಿಳಾ ಪೊಲೀಸ್​ ಠಾಣೆ ಪೊಲೀಸರು ಈ ಪ್ರೇಮಿಗಳ ಮುಹೂರ್ತಕ್ಕೆ ಪೌರೋಹಿತ್ಯ ವಹಿಸಿದ್ದರು.

ಮನೀಷಾ​ ಮತ್ತು ಕಿರಣ್​ ಎನ್ನುವ ಪ್ರೇಮಿಗಳೇ ದಾಂಪತ್ಯಕ್ಕೆ ಕಾಲಿಟ್ಟವರು. ಮದುವೆಯಾಗಲು ಮನೆಯವರು ಒಪ್ಪದ ಕಾರಣಕ್ಕೆ ​ಮನೀಷಾ ತನ್ನ ಮನೆ ಬಿಟ್ಟು ಬಂದು ಕಿರಣ್​ ಮನೆಯಲ್ಲಿದ್ದಳು.

ಹುಡುಗಿ ಮನೆಯ ಕಡೆಯವರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಪ್ರೇಮಿಗಳು ಪೊಲೀಸ್​ ಆಯುಕ್ತರ ಮನೆಗೆ ತೆರಳಿ ತಮ್ಮ ದುಃಖ ಹೇಳಿಕೊಂಡಿದ್ದರು. ಆಯುಕ್ತರ ಸೂಚನೆ ಮೇರೆಗೆ ಮಹಿಳಾ ಪೊಲೀಸ್​ ಅಧಿಕಾರಿ ಶಾರದಾ ಚೌಧರಿ ಮುಂದೆ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿ ಆಶೀರ್ವದಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net