ಮಗಳು ರಾಖಿ ಕಟ್ಟಲು ಸಹೋದರನಿಲ್ಲವೆಂದು ಮಗುವನ್ನು ಕಿಡ್ನಾಪ್ ಮಾಡಿದ ದಂಪತಿ

baby
ಸಾಂದರ್ಭಿಕ ಚಿತ್ರ
Published on

ನವದೆಹಲಿ: ರಾಖಿ ಕಟ್ಟಲು ಸಹೋದರರಿಲ್ಲ ಎಂದು ಮಗಳು ಬೇಸರ ವ್ಯಕ್ತಪಡಿಸಿದ್ದಾಳೆ. ಮಗಳ ಆಸೆಯನ್ನು ಈಡೇರಿಸಲು ಪೋಷಕರು ಯಾವುದೇ ಯೋಚನೆ ಮಾಡದೆ ಒಂದು ತಿಂಗಳ ಮಗುವನ್ನು ಕದ್ದೊಯ್ದಿದ್ದಾರೆ. ಈ ವಿಚಿತ್ರ ಘಟನೆ ದೆಹಲಿಯಲ್ಲಿ ಈ ನಡೆದಿದೆ.

ಗುರುವಾರ ಮುಂಜಾನೆ 4.34 ಕ್ಕೆ ರಾಷ್ಟ್ರ ರಾಜಧಾನಿಯ ಚಟ್ಟಾ ರೈಲ್ ಚೌಕ್‌ನಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ ವಿಕಲಾಂಗ ಮಹಿಳೆಯ ಬಳಿ ಇದ್ದ ಶಿಶುವನ್ನು ಅಪಹರಿಸಲಾಗಿದೆ. ತಮ್ಮ ಮಗುವನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆಯ ಭಾಗವಾಗಿ ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಸುಮಾರು 400 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಮಗುವನ್ನು ಕರೆದುಕೊಂಡು ಹೋಗಿರುವುದು ಪತ್ತೆಯಾಗಿದೆ.

ಸಂಜಯ್ ಎಂಬುವವರ ಹೆಸರಿನಲ್ಲಿ ಬೈಕ್ ನಂಬರ್ ದಾಖಲಾಗಿರುವುದು ಪತ್ತೆಯಾಗಿದೆ. ರಘುಬೀರ್ ನಗರದ ಟ್ಯಾಗೋರ್ ಗಾರ್ಡನ್ ನ ಸಿ-ಬ್ಲಾಕ್ ಮೇಲೆ ಸುಮಾರು 15 ಜನರಿದ್ದ ಪೊಲೀಸ್ ತಂಡ ದಾಳಿ ನಡೆಸಿ ಒಳಗೆ ಹೋಗಿ ಆರೋಪಿಯಿಂದ ಕಳ್ಳತನವಾದ ಮಗು ಪತ್ತೆಯಾಗಿದೆ. ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ ಮಗು ಅಲ್ಲಿ ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಆರೋಪಿಗಳನ್ನು ಸಂಜಯ್ ಗುಪ್ತಾ (41) ಎಂದು ಗುರುತಿಸಲಾಗಿದೆ. ಅನಿತಾಗುಪ್ತ (36) ಎಂದು ಗುರುತಿಸಲಾಗಿದೆ. ಸಂಜಯ್ ಗುಪ್ತಾ ದಂಪತಿಯನ್ನು ಶನಿವಾರ ಬಂಧಿಸಲಾಗಿದೆ.

ಟ್ಯಾಗೋರ್ ಗಾರ್ಡನ್‌ನ ರಘುಬೀರ್‌ನಗರದ ಆರೋಪಿ ದಂಪತಿಯ ಪುತ್ರ (17) ಕಳೆದ ವರ್ಷ ಆಗಸ್ಟ್ 17 ರಂದು ಟೆರೇಸ್‌ನಿಂದ ಬಿದ್ದು ಸಾವನ್ನಪ್ಪಿದ್ದರು. ಅವರಿಗೆ 15 ವರ್ಷದ ಮಗಳಿದ್ದಾಳೆ. ಮುಂಬರುವ ರಕ್ಷಾ ಬಂಧನಕ್ಕೆ ರಾಖಿ ಕಟ್ಟಲು ಕಿರಿಯ ಸಹೋದರ ಬಯಸಿದ್ದಳು. ಆದ್ದರಿಂದ ರೈಲ್ ಚೌಕ್ ಬಳಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ಹುಡುಗನನ್ನು ಅಪಹರಿಸಿರುವುದಾಗಿ ದಂಪತಿ ತಿಳಿಸಿದ್ದಾರೆ.

ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್, ಈ ಹಿಂದೆ ಮೂರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಆತನ ಪತ್ನಿ ಅನಿತಾ ಗುಪ್ತಾ ಮೆಹಂದಿ ಕಲಾವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net