ಪ್ರೀತಿಸಿ ಮದುವೆ ಆಸೆ ಇಟ್ಟುಕೊಂಡಿದ್ದ ಜೋಡಿಗೆ ಕೊನೆ ಗಳಿಗೆಯಲ್ಲಿ ಅಡ್ಡಿಯಾಯಿತೇ ರಕ್ತ ಸಂಬಂಧ! | Married

Untitled design - 2025-09-06T081234.610
Published on

Married: ಪ್ರೀತಿ ವೈಫಲ್ಯದಿಂದ ಯುವತಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಶಿವಂಪೇಟೆ ಜಿಲ್ಲೆಯ ನರಸಾಪುರದಲ್ಲಿ ಇತ್ತೀಚಿಗೆ ನಡೆದಿದೆ.

ತಲ್ಲಪಲ್ಲಿ ತಾಂಡಾದ ಸಕ್ಕುಬಾಯಿ (21) ಮೃತೆ. ಎಂಬಿಎ ಮುಗಿಸಿ ಮನೆಯಲ್ಲಿಯೇ ಇದ್ದು ಕೆಲಸ ಹುಡುಕಲು ಪ್ರಯತ್ನಿಸುತ್ತಿದ್ದ ಈಕೆ ಇಂದ್ರಕರಣ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ನಾರಾಯಣಖೇಡ್‌ನ ಸುಧಾಕರ್ ಅಲಿಯಾಸ್ ಸಿದ್ದು ಎಂಬಾತನನ್ನು ತಾನು ಪ್ರೀತಿಸುತ್ತಿರುವುದಾಗಿಯೂ, ಆತನನ್ನೇ ಮದುವೆಯಾಗುವುದಾಗಿಯೂ ತನ್ನ ಪೋಷಕರಿಗೆ ತಿಳಿಸಿದ್ದಳು.

ಇದಕ್ಕೆ ಒಪ್ಪಿದ್ದ ಕುಟುಂಬ ಸದ್ಯಸರು ಇಬ್ಬರ ಗೋತ್ರಗಳನ್ನು(ಜ್ಯೋತಿಷ್ಯ) ಪರಿಶೀಲಿಸಿದಾಗ ಮತ್ತು ಕುಟುಂಬದ ಹಿನ್ನೆಲೆ ಪರಿಶೀಲನೆ ಮಾಡಿದಾಗ ಅವರಿಬ್ಬರೂ ಒಡಹುಟ್ಟಿದ್ದಾರೆ ಎಂದು ತಿಳಿಯುತ್ತದೆ. ಈ ಹಿನ್ನೆಲೆ ಕುಟಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಿಂದ ಅಸಮಾಧಾನಗೊಂಡ ಯುವತಿ ಈ ತಿಂಗಳ 1 ರಂದು ಮನೆಯಲ್ಲಿ ಕೀಟನಾಶಕ ಸೇವಿಸಿದ್ದಾಳೆ. ಆಕೆಯನ್ನು ನರಸಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮೃತಳ ತಂದೆ ಕೇಶ್ಯಾನಾಯಕ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net