ಕರೊನಾ ಲಸಿಕೆ ಪಡೆದವರಿಗೆ ಚಿನ್ನದ ಕಿವಿಯೋಲೆ, ಸೀರೆ ಗಿಫ್ಟ್!

corona saree gift
Published on

ಕೊಪ್ಪಳ: ಕರೊನಾ ಲಸಿಕೆ ಪಡೆಯಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಅಂಥವರ ಮನವೊಲಿಸಲು ಮುಂದಾದ ಸಿಬ್ಬಂದಿ ಕೊಪ್ಪಳದಲ್ಲಿ 8 ಸಾವಿರ ರೂ. ಬೆಲೆ ಬಾಳುವ ಕಿವಿಯೋಲೆಯನ್ನು ಗಿಫ್ಟ್​ ಆಗಿ ಕೊಡಲು ಮುಂದಾಗಿದ್ದಾರೆ.

ನಗರದ ಹುಸೇನಿ ಮೊಹಲ್ಲಾ ಮುಸ್ಲಿಂ ಪಂಚ್ ಕಮಿಟಿ ನೇತೃತ್ವದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಸೈಯದಾ ಶಹನಾಜ್ ಬೇಗಂ ಹಾಗೂ ಇವರ ಪತಿ ನಾಸೀರ್ ಹುಸೇನ್ ಜನರಿಗೆ ಚಿನ್ನದ ಕಿವಿಯೋಲೆಯನ್ನ ಗಿಫ್ಟ್​ ನೀಡಿದ್ದಾರೆ.

ಲಸಿಕೆ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿದ್ದು, ಕೆಲವರು ಪಡೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಅಧಿಕಾರಿಗಳು ನಾನಾ ಕಸರತ್ತು ನಡೆಸಿ, ಲಸಿಕೆ ನೀಡುತ್ತಿದ್ದಾರೆ. ನಾವೂ ಏನಾದರೂ ಸೇವೆ ಮಾಡೋಣ ಎಂದುಕೊಂಡು ಲಸಿಕಾ ಕಾರ್ಯಕ್ರಮ ಆಯೋಜಿಸಿದ್ದೇವೆ. ಶುಕ್ರವಾರ ಒಟ್ಟು 200 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅದರಲ್ಲೂ ಮಹಿಳೆಯರಿಗೆ ವ್ಯಾಕ್ಸಿನ್ ಪಡೆಯುವಂತೆ ಉತ್ತೇಜಿಸಲು ಒಂದೂವರೆ ಗ್ರಾಂ ತೂಕದ ಕಿವಿಯೋಲೆ ಹಾಗೂ ಸಮಾಧಾನಕರ ಬಹುಮಾನವಾಗಿ 50 ಸೀರೆ ನೀಡುತ್ತಿದ್ದೇವೆ. ಲಸಿಕೆ ಪಡೆದವರ ವಿವರ ಬರೆದು ಬಾಕ್ಸ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಲಸಿಕಾ ಕಾರ್ಯಕ್ರಮ ಮುಗಿದ ಬಳಿಕ ಡ್ರಾ ಮಾಡಿ ವಿಜೇತರಿಗೆ ಕಿವಿಯೋಲೆ, ಸೀರೆ ವಿತರಿಸಲಾಗುವುದು ಎಂದು ಸೈಯದಾ ಬೇಗಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net