

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕರೊನಾ ಎರಡನೇ ಅಲೆಯಲ್ಲಿ ಕರೊನಾ ಸೋಂಕಿತರಾಗಿದ್ದ ದೇವೇಗೌಡರು ಬಹು ಬೇಗನೆ ಚೇತರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕರೊನಾ ಸೋಂಕು ತಗುಲಿದ್ದು, ನಿನ್ನೆ (ಜ.21) ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಅವರಿಗೆ ಕರೊನಾ ಸೋಂಕು ತಗುಲಿತ್ತು.
ದೇವೇಗೌಡರ ಆರೋಗ್ಯ ಕುರಿತು ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯದ ದೃಷ್ಟಿಯಿಂದ ದೇವೇಗೌಡರು ಸದೃಢರಾಗಿದ್ದು, ಸೌಮ್ಯರೂಪದ ಸೋಂಕಿಗೆ ಒಳಗಾಗಿರಬಹುದು. ಅವರ ಕುಟುಂಬದ ಸದಸ್ಯರು, ಮಣಿಪಾಲ್ ಆಸ್ಪತ್ರೆ ವೈದ್ಯರು ತಮ್ಮ ಮತ್ತು ಸಿಬ್ಬಂದಿ ಜತೆಗೆ ಮಾತನಾಡಿ ಯೋಗಕ್ಷೇಮ ವಿಚಾರಿಸುವ ಜತೆಗೆ ಸೂಕ್ತ ಸೂಚನೆ ನೀಡುವೆ ಎಂದರು.