ಕೆಜಿಎಫ್ ಬಾಬು ಮೇಲೆ ಅವರ ಹೆಂಡ್ತೀನೆ ದೂರು ಕೊಟ್ಟಿದ್ದಾರೆ, ನನಗೆ ಗೊತ್ತು ಆತನ ಹಿನ್ನೆಲೆ: ಸಚಿವ ಸೋಮಶೇಖರ್

kgf babu st somashekhar
Published on

ಚಾಮರಾಜನಗರ: ಬೆಂಗಳೂರು ನಗರ ಕ್ಷೇತ್ರದ ವಿಧಾನಪರಿಷತ್​ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಕೆಜೆಎಫ್ ಬಾಬು ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್​ಗೆ ಎಬಿಸಿಡಿ ಗೊತ್ತಿಲ್ಲ. ನನಗೆ ಗೊತ್ತು ಆತ ಯಾರು? ಆತನ ಹಿನ್ನೆಲೆ ಏನು? ಎಂದು. ಬಾಬು ವಿರುದ್ಧ 60ಕ್ಕೂ ಹೆಚ್ಚು ಎಫ್​ಐಆರ್​ ದಾಖಲಾಗಿವೆ. ನನ್ನ ಮೊಬೈಲ್​ನಲ್ಲೇ ಆತನ ವಿರುದ್ಧದ 20 ಕೇಸ್​ನ ಎಫ್​ಐಆರ್​ ಪ್ರತಿ ಇದೆ ಎಂದು ಸಚಿವ ಎಸ್​.ಡಿ. ಸೋಮಶೇಖರ್ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸಚಿವರು. ಧ್ರುವನಾರಾಯಣ್​ಗೆ ಮೈಸೂರಿನದ್ದು ಗೊತ್ತಿದೆ. ಬೆಂಗಳೂರಿನದ್ದು ಏನು ಗೊತ್ತಿದೆ. ಕಾಂಗ್ರೆಸ್​ಗೆ ಬೇರೆ ಕ್ಯಾಂಡಿಡೆಟ್​ ಸಿಗ್ತಿರಲಿಲ್ಲವಾ? ಎಂದು ದಾಖಲೆ ಸಮೇತ ಡಿ.4ರಂದು ನಾನು ಮಾತಾಡ್ತೀನಿ. ಕೆಜಿಎಫ್ ಬಾಬು ಉತ್ತಮ ಅಭ್ಯರ್ಥಿ ಎಂಬಂತೆ ಧ್ರುವನಾರಾಯಣ್​ ಹೇಳಿದ್ದಾರೆ. ಅವರಿಗೆ ಎಬಿಸಿಡಿಯೂ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ಅತ್ತ ವೈಯಕ್ತಿಕ ವಿಚಾರವನ್ನು ಎಳೆದುತಂದ ಸೋಮಶೇಖರ್​ ವಿರುದ್ಧ ಸಾವಿರ ಕೋಟಿ ಒಡೆಯ ಕೆಜಿಎಫ್​ ಬಾಬು ಅವರ ಇಬ್ಬರು ಪತ್ನಿಯರೂ ಕಿಡಿಕಾರಿದ್ದಾರೆ. ಬುಧವಾರ ಕುಟುಂಬ ಸಮೇತ ಸುದ್ದಿಗೋಷ್ಠಿ ನಡೆಸಿದ ಕೆಜಿಎಫ್​ ಬಾಬು, ರಾಜಕೀಯ ಅಂದ್ರೆ ಹೀಗೀರುತ್ತೆ ಅಂತಾ ಗೊತ್ತಿದ್ದರೆ ನಾನು ರಾಜಕೀಯಕ್ಕೇ ಬರುತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕೆಜಿಎಫ್ ಬಾಬು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಇವರ ಜತೆಗೆ ಪತ್ನಿರೂ ಅಳುತ್ತಾ, ನಮ್ಮ ಗಂಡ ತುಂಬಾ ಒಳ್ಳೆಯವರು. ಹಳೆಯದ್ದನ್ನೆಲ್ಲ ಈಗ ಕೆದಕಬೇಡಿ ಎಂದು ಗೋಳಾಡಿದರು. ಸಚಿವರೇ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ನಿಮಗೆ ಅಕ್ಕ-ತಂಗಿಯರು ಇಲ್ವಾ..? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net