ಮಡಿಕೇರಿಯಲ್ಲಿ ಚಿತ್ರನಟ ಚೇತನ್​ ವಿರುದ್ಧ ದೂರು ದಾಖಲು

Chethan
Published on

ಮಡಿಕೇರಿ: ದೈವಾರಾಧನೆ ಹಿಂದು ಸಂಪ್ರದಾಯವಲ್ಲ ಎಂಬ ಹೇಳಿಕೆ ನೀಡುವ ಮೂಲಕ ಚಿತ್ರನಟ ಚೇತನ್​ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೊಡಗು ಯುವಸೇನೆ ಮಡಿಕೇರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆ.

ಯುವಸೇನೆಯ ಜಿಲ್ಲಾ ಉಪಾಧ್ಯಕ್ಷ ನಡುಮುಟ್ಲು ಪ್ರವಿಣ್​ ಅವರು ಡಿವೈಎಸ್​ಪಿ ಗಜೇಂದ್ರಪ್ರಸಾದ್​ ಅವರಿಗೆ ಶುಕ್ರವಾರ ದೂರು ಸಲ್ಲಿಸಿ, ಚೇತನ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಯುವಸೇನೆ ಮುಖಂಡ ಕುಲ್ದೀಪ್​, ಪೂಣಚ್ಚ​ ಇದ್ದರು.

ರಿಷಬ್​ ಶೆಟ್ಟಿ ನಿರ್ದೇಶನದ ದೈವಾರಾಧನೆ ಕಥೆಯಾಧಾರಿತ "ಕಾಂತಾರ'' ಚಿತ್ರ ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ದೈವಶಕ್ತಿಯನ್ನು ಪ್ರತಿಬಿಂಬಿಸಿದೆ. ಚಿತ್ರ ಲಕ್ಷಾಂತರ ಭಕ್ತರ ಮನಸೂರೆಗೊಳ್ಳುತ್ತಿರುವ ಹೊತ್ತಿನಲ್ಲಿ ನಟ ಚೇತನ್​ ದೈವಾರಾಧನೆ ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net