

ಕುಮಟಾ: ತಾಲೂಕಿನ ಕೋನಳ್ಳಿಯ ಶೆಟ್ರಕೇರಿಯ ವಿನಾಯಕ ಶೇಟ ಅವರ ತೋಟದಲ್ಲಿ ಬೆಳೆದ ತೆಂಗಿನ ಕಾಯಿಯೊಂದು ಬರೋಬ್ಬರಿ 1.160 ಕೆಜಿ ತೂಗುವ ಮೂಲಕ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಗಾತ್ರ, ತಿರುಳು ಹಾಗೂ ರುಚಿಯಲ್ಲಿ ಕುಮಟಾ ಕಾಯಿ ಎಂದೇ ಹೊರಜಿಲ್ಲೆಗಳಲ್ಲೂ ವಿಶೇಷ ಬೇಡಿಕೆ ಹೊಂದಿರುವ ಇಲ್ಲಿನ ತೆಂಗಿನ ಕಾಯಿಗಳು ದೊಡ್ಡದಾಗಿದ್ದರೆ ಅರ್ಧದಿಂದ ಮುಕ್ಕಾಲು ಕೆಜಿಯ ಆಸುಪಾಸಿನಲ್ಲಿ ತೂಗುತ್ತವೆ. ಆದರೆ, ವಿನಾಯಕ ಶೇಟ ಅವರ ತೋಟದ ಈ ತೆಂಗಿನ ಕಾಯಿಯ ಸಿಪ್ಪೆ ಸುಲಿದು ಜುಟ್ಟಿನ ಭಾಗ ತೆಗೆದ ಮೇಲೂ 1 ಕೆಜಿ 160 ಗ್ರಾಂ ಭಾರ ಇದೆ. ಹೀಗಾಗಿಯೇ ತಮ್ಮ ತೋಟದಲ್ಲಿ ಬೆಳೆದ ತೆಂಗಿನ ಕಾಯಿಯ ತೂಕದ ಚಿತ್ರಣವನ್ನು ವಿನಾಯಕ ಶೇಟ ವಿಜಯವಾಣಿ ಓದುಗರ ಮಾಹಿತಿಗಾಗಿ ನೀಡಿದ್ದಾರೆ.