ಅವಧಿಗೂ ಮುನ್ನವೇ ಸಿಎಂ ಬದಲಾಯಿಸಿದರೆ ಹೋರಾಟ: ಹೈಕಮಾಂಡ್​ಗೆ ವಿವಿಧ ಮಠಾಧೀಶರ ಎಚ್ಚರಿಕೆ

murugashranaru
Published on

ಬೆಂಗಳೂರು: ರಾಜ್ಯದಲ್ಲಿ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಕಟ್ಟಿದವರು ಬಿ.ಎಸ್​. ಯಡಿಯೂರಪ್ಪ. ಬಿಜೆಪಿ ಸರ್ಕಾರ ರಚಿಸಿದ ಹೆಗ್ಗಳಿಕೆ ಅವರದ್ದು. ಪ್ರತಿ ‌ಚುನಾವಣೆ ಅವರ ನೇತೃತ್ವದಲ್ಲೇ ಆಗಿದೆ. ಪಕ್ಷಕ್ಕಾಗಿ ‌ಶ್ರಮಿಸಿದ್ದಾರೆ. ರಾಜ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂತಹ ಮೇಧಾವಿ ಮುತ್ಸದ್ಧಿಯನ್ನು ಅಲಕ್ಷಿಸಬೇಡಿ. ಒಂದು ವೇಳೆ ಅಲಕ್ಷಿಸಿದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತೆ ಎಂದು ಬಿಜೆಪಿ ಹೈಕಮಾಂಡ್​ಗೆ ಮುರುಘಾ ಶರಣರು ಎಚ್ಚರಿಸಿದ್ದಾರೆ.

ಅವಧಿಗೂ ಮುನ್ನವೇ ಮುಖ್ಯಮಂತ್ರಿ ಬದಲಾವಣೆ ಬೇಡ ಎಂದಿರುವ ಮುರುಘಾ ಶರಣರು ಮತ್ತು ದಲಿತ, ಹಿಂದುಳಿದ ವರ್ಗಗಳ ಮಠಾಧೀಶರು, ಯಡಿಯೂರಪ್ಪ ಅವರ ಕಾಲನ್ನು ಏಕೆ ಎಳೆಯತ್ತಿದ್ದೀರಿ? ಅವರಿಗೆ ಸ್ವಾತಂತ್ರ್ಯಕೊಡಿ, ಅಭಿವೃದ್ಧಿ ಮಾಡಿ ತೋರಿಸುತ್ತಾರೆ ಎಂದಿದ್ದಾರೆ. ಅವಧಿಗೆ ಮುನ್ನವೇ ಸಿಎಂ ಬದಲಾಯಿಸಿದರೆ ಹೋರಾಟ ಮಾಡುವುದಾಗಿ ಬಿಜೆಪಿ ಹೈಕಮಾಂಡ್​ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಳ್ಳಿ. ಈ ಹಂತದಲ್ಲಿ ನಾಯಕತ್ವ ಬದಲಾವಣೆ ಬೇಡ ಎಂದು ರಾಷ್ಟ್ರೀಯ ನಾಯಕರಿಗೆ ಮುರುಘಾ ಶರಣರು ಕಿವಿಮಾತು ಹೇಳಿದ್ದಾರೆ.

ಮಾದಾರ ಚನ್ನಯ್ಯ ಶ್ರೀಗಳು, ಭೋವಿ ಶ್ರೀಗಳು, ಇಳಕಲ್ ಶ್ರೀಗಳು, ಕುಂಚಿಟಿಗ ಶ್ರೀಗಳು ಸಿಎಂ ಸ್ಥಾನದಿಂದ ಯಡಿಯೂರಪ್ಪರ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net