ಒಳ ಮೀಸಲಾತಿ ಪರ ಹೋರಾಟಕ್ಕೆ ಸಂದ ಜಯ

2
ಒಳ ಮೀಸಲಾತಿ ವರ್ಗೀಕರಣದ ಪರವಾಗಿ ಸುಪ್ರೀಂ ಕೋರ್ಟ್​ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರಿನ ಬಿಜಿಎಸ್​ ವೃತ್ತದಲ್ಲಿ ಸಂಭ್ರಮಾಚರಿಸಲಾಯಿತು. ಮುಖಂಡರಾದ ಮಾರುತಿ ಪ್ರಸಾದ್​, ಕೋಡಿಯಾಲ ಮಹದೇವ್​, ದಸಂಸ ಜಿಲ್ಲಾಧ್ಯಕ್ಷ ಪಿ.ಎನ್​.ರಾಮಯ್ಯ, ಬಂಡೆಕುಮಾರ್​, ಶ್ರೀನಿವಾಸಮೂರ್ತಿ, ಗಂಲಗಂಜಿಹಳ್ಳಿ ಸುರೇಶ್​, ಗೂಳಹರಿವೆ ನಾಗರಾಜು, ಜಯಚಂದ್ರ, ಉರ್ಡಿಗೆರೆ ಕೆಂಪರಾಜು, ಆಟೋ ಶಿವರಾಜು ಇದ್ದರು.
Published on

ದಲಿತ ಸಂಟನೆಗಳ ಒಕ್ಕೂಟದಿಂದ ಸಂಭ್ರಮಾಚರಣೆ

ವಿಜಯವಾಣಿ ಸುದ್ದಿಜಾಲ ತುಮಕೂರು
ಒಳ ಮೀಸಲಾತಿ ವರ್ಗೀಕರಣದ ಪರವಾಗಿ ಸುಪ್ರೀಂ ಕೋರ್ಟ್​ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಬಿಜಿಎಸ್​ ವೃತ್ತದಲ್ಲಿ ಸಂಭ್ರಮಾಚರಿಸಲಾಯಿತು.


ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ದಲಿತ ಮುಖಂಡರು, ಮೂರು ದಶಕಗಳ ಮಾದಿಗ ಮತ್ತು ಒಳ ಮೀಸಲಾತಿ ಪರ ಹೋರಾಟಕ್ಕೆ ಸಂದ ಜಯ ಎಂದರು.


ಉಪನ್ಯಾಸಕ ಕೊಟ್ಟಶಂಕರ್​ ಮಾತನಾಡಿ, ಇದೊಂದು ಐತಿಹಾಸಿಕ ತೀರ್ಪು, ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿದ್ದ ಒಳಮೀಸಲಾತಿ ಜಾರಿ ಕುರಿತಂತೆ ಇದ್ದ ಕೇಸಿಗೆ ಏಳು ನ್ಯಾಯಾಮೂರ್ತಿಗಳು ಗುರುವಾರ ತೀರ್ಪು ನೀಡಿದ್ದು, ಒಳಮೀಸಲಾತಿ ವರ್ಗೀಕರಣ ಆಯಾ ರಾಜ್ಯಗಳು ಮಾಡಲು ಒಪ್ಪಿಗೆ ನೀಡಿದೆ ಎಂದರು.


ಆಂದ್ರಪ್ರದೇಶದ ಮುಖ್ಯಮಂತ್ರಿ ರೇವಂತರೆಡ್ಡಿ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದು, ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಹ ಒಳಮೀಸಲಾತಿ ಜಾರಿ ಮಾಡಲಿದ್ದಾರೆ. ಕ್ರಿಮಿಲೇಯರ್​ ಸಂಬಂಧಿಸಿದ್ದ ತಾಂತ್ರಿಕ ತೊಡಕಿನ ಬಗ್ಗೆ ತಜ್ಞರ ಅಭಿಪ್ರಾಯ ಕೇಳಿದ್ದಾರೆ ಎಂದರು.


ಹರಿಯಾಣ ಮತ್ತು ಆಂಧ್ರಪ್ರದೇಶದಲ್ಲಿದ್ದ ಒಳಮೀಸಲಾತಿ ಕುರಿತಂತೆ 2004ರಿಂದ ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದ್ದು, ಈಗ ತೀರ್ಪು ಬಂದಿದೆ. ಇದಕ್ಕಾಗಿ ಹೋರಾಟ ನಡೆಸಿ ದಸಂಸ, ಮಾದಿಗ ದಂಡೋರ, ಎಂಆರ್​ಎಚ್​ಎಸ್​ ಸೇರಿ ಹಲವು ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಈ ತೀರ್ಪು ನೀಡಿದೆ. ಒಳಮೀಸಲಾತಿ ಜಾರಿಗೆ ಕಲಂ 341 ತಿದ್ದುಪಡಿ ಅಗತ್ಯವಿಲ್ಲ. ರಾಜ್ಯ ಸರ್ಕಾರಗಳೇ ಜಾರಿಗೆ ತರಬಹುದು ಎಂದು ತೀರ್ಪು ನೀಡಿದೆ. ಈ ತೀರ್ಪಿಗಾಗಿ ಹೋರಾಟ ನಡೆಸಿದ ಎಲ್ಲರಿಗೂ ಜಯ ಸಲ್ಲಬೇಕು ಎಂದರು. ಮುಖಂಡರಾದ ಮಾರುತಿ ಪ್ರಸಾದ್​, ಕೋಡಿಯಾಲ ಮಹದೇವ್​, ದಸಂಸ ಜಿಲ್ಲಾಧ್ಯಕ್ಷ ಪಿ.ಎನ್​.ರಾಮಯ್ಯ, ಬಂಡೆಕುಮಾರ್​, ಶ್ರೀನಿವಾಸಮೂರ್ತಿ, ಗಂಲಗಂಜಿಹಳ್ಳಿ ಸುರೇಶ್​, ಗೂಳಹರಿವೆ ನಾಗರಾಜು, ಜಯಚಂದ್ರ, ಉರ್ಡಿಗೆರೆ ಕೆಂಪರಾಜು, ಆಟೋ ಶಿವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net