

ಚಿತ್ರದುರ್ಗ: ಈ ಊರಲ್ಲಿ ಒಬ್ಬಂಟಿಯಾಗಿ ಜನರು ಓಡಾಡೋಕು ಭಯ ಪಡ್ತಿದ್ದಾರೆ. ಒಂಟಿಯಾಗಿ ಓಡಾಡಿದ್ರೆ ತಲೆ ಮೇಲೆ ಕುಟುಕಿ ಹೋಗತ್ತೆ ಕಾಗೆ! ಮನೆಯಿಂದ ಹೊರಗೆ ಬಂದ್ರೆ ಸಾಕು ಈ ಕಾಗೆ ಬರುತ್ತೆ. ರಸ್ತೆಯಲ್ಲಿ ಗ್ರಾಮಸ್ಥರಿಗೆ ಓಡಾಡೋಕೂ ಬಿಡದೆ ಕಾಡುತ್ತಿದೆ...
ಈ ದೃಶ್ಯ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ಓಬಳಾಪುರ ಗ್ರಾಮದಲ್ಲಿ ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿನಿಂದ ಕಾಟ ಕೊಡ್ತಿದೆ. ಕಾಗೆ ಕಾಟಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಇದಕ್ಕೆಲ್ಲ ಕಾರಣ ಅರ್ಧಕ್ಕೆನಿಂತ ಆಂಜನೇಯ ಸ್ವಾಮಿ ದೇವಾಲಯ ಕಾಮಗಾರಿ ಅಂತೆ!
ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. 10 ವರ್ಷ ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದೇ ಕಾರಣಕ್ಕೆ ಕಾಗೆ ಜನರಿಗೆ ಕಾಟ ಕೊಡ್ತಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.