ಗಂಡನ ಬಿಟ್ಟು ಪ್ರಿಯಕರನ ಹಿಂದೆ ಹೋದಾಕೆ ದುರಂತ ಅಂತ್ಯ! ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಪ್ರಿಯಕರ

love case
Published on

ಚಿತ್ರದುರ್ಗ: ಮೂರು ತಿಂಗಳ ಹಿಂದೆ ಗಂಡನನ್ನು ತೊರೆದು ಪ್ರಿಯಕರನ ಜತೆ ಹೋಗಿದ್ದ ಯುವತಿ ದುರಂತ ಅಂತ್ಯಕಂಡಿದ್ದು, ಈಕೆಯ ಪ್ರಿಯಕರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ದಿವ್ಯಾ(22) ಮೃತ ದುರ್ದೈವಿ. ದಿವ್ಯಾಗೆ ಈಗಾಗಲೇ ಬೇರೊಬ್ಬನ ಜತೆ ಮದುವೆ ಆಗಿತ್ತು. ಆದರೂ ಗಂಡನನ್ನು ಬಿಟ್ಟು ದಿವ್ಯಾ 3 ತಿಂಗಳ ಹಿಂದೆ ಪ್ರಿಯಕರ ಮಂಜುನಾಥ್ ಎಂಬಾತನ ತೆರಳಿದ್ದಳು. ಇವರಿಬ್ಬರೂ ಹಿರಿಯೂರು ಪಟ್ಟಣದಲ್ಲಿ ವಾಸವಾಗಿದ್ದರು.

ಇತ್ತೀಚಿಗೆ ಜ್ವರ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ದಿವ್ಯಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ದಿವ್ಯಾಳ ಮೈಮೇಲೆ ಬರೆ ಮತ್ತು ಪರಚಿದ ಗಾಯದ ಗುರುತುಗಳಿವೆ. ಹಲ್ಲೆ ನಡೆಸಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಮೃತಳ ಪಾಲಕರು ಪ್ರಿಯಕರ ಮಂಜುನಾಥ್ ವಿರುದ್ಧ ಆರೋಪಿಸಿದ್ದಾರೆ. ಅತ್ತ ಪತ್ನಿ ಸಾವಿಂದ ಕಂಗೆಟ್ಟ ಮಂಜುನಾಥ್, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ದಿವ್ಯಾಳ ಸಾವಿನ ರಹಸ್ಯ ಹೊರಬರಬೇಕಿದೆ. (ದಿಗ್ವಿಜಯ ನ್ಯೂಸ್​, ಚಿತ್ರದುರ್ಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net