ಚಿತ್ರದುರ್ಗದಲ್ಲಿ ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆಯರಿಬ್ಬರು ದುರಂತ ಸಾವು

New Project (27)
Published on

ಚಿತ್ರದುರ್ಗ: ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆಯಬ್ಬರ ಮೇಲೆ ರೈಲು ಹರಿದಿದ್ದು, ಸ್ಥಳದಲ್ಲಿ ಅವರು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಮೃತರನ್ನು ಚಳ್ಳಕೆರೆ ರಸ್ತೆಯ ವೆಂಕಟೇಶ್ವರ ಬಡಾವಣೆ ನಿವಾಸಿಗಳಾದ ನೇತ್ರ(24) ಹಾಗೂ ಸುಶೀಲಮ್ಮ(34) ಎಂದು ಗುರುತಿಸಲಾಗಿದೆ. ಇವರಿಬ್ಬರೂ ರಾಷ್ಟ್ರೀಯ ಹೆದ್ದಾರಿ 13ರ ಸಮೀಪ ಕನಕ ನಗರದ ಬಳಿ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿದ್ದಾರೆ. ಮೃತರು ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net