ಉಪ ಚುನಾವಣೆ ಬೆನ್ನಲ್ಲೇ 6 ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ: ಕುತೂಹಲ ಮೂಡಿಸಿದೆ ಸಿಎಂ ನಡೆ

VidhanSoudha 2 Jan 2020
Published on

ಬೆಂಗಳೂರು: ಕರೊನಾಘಾತದ ನಡುವೆಯೇ ನಡೆದ ಬೆಳಗಾವಿ ಲೋಕಸಭಾ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದ ಬೆನ್ನಲ್ಲೇ ಹಲವು ಜಿಲ್ಲೆಗಳ ಉಸ್ತುವಾರಿ ಸಚಿವರನ್ನ ಸಿಎಂ ಯಡಿಯೂರಪ್ಪ ಬದಲಾವಣೆ ಮಾಡಿದ್ದಾರೆ.

ಇಂದು(ಭಾನುವಾರ) ಮೂರು ಕ್ಷೇತ್ರಗಳ ಮತಎಣಿಕೆ ನಡೆದಿದ್ದು, ಫಲಿತಾಂಶ ಪ್ರಕಟಕ್ಕೂ ಮುನ್ನವೇ ಆರು ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ ಆಗಿದೆ. ಇದು ಕರೊನಾ ನಿಂತ್ರಣ ನಿಟ್ಟಿನಲ್ಲಾದ ಬದಲಾವಣೆ ಎಂದು ಕೆಲವು ಹೇಳುತ್ತರಾದರೂ ಉಪಚುನಾವಣೆ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕೆಲವೇ ಕ್ಷಣ ಇದೆ ಎನ್ನುವಾಗ ಈ ಬದಲಾವಣೆ ಆಗಿರುವುದು  ಬದಲಾವಣೆ ಭಾರೀ ಕುತೂಹಲ ಮೂಡಿಸಿದೆ. ಈ ಕೆಳಕಂಡ ಜಿಲ್ಲೆಗಳಿಗೆ ನೇಮಕವಾದ ನೂತನ ಸಚಿವರ ಪಟ್ಟಿ ಇಲ್ಲಿದೆ.

ಗೋವಿಂದ ಕಾರಜೋಳ- ಬೆಳಗಾವಿ

ಉಮೇಶ್ ಕತ್ತಿ- ಬಾಗಲಕೋಟೆ

ಅರವಿಂದ ಲಿಂಬಾವಳಿ- ಬೀದರ್

ಎಂಟಿಬಿ ನಾಗರಾಜ್- ಕೋಲಾರ

ಮುರಗೇಶ್ ನಿರಾಣಿ- ಕಲಬುರಗಿ

ಎಸ್. ಅಂಗಾರ- ಚಿಕ್ಕಮಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net