ಚಾ.ನಗರದಲ್ಲಿ ದುರಂತ: ಕ್ವಾರಿಯಲ್ಲಿ ಬಂಡೆ ಕುಸಿತ, 10ಕ್ಕೂ ಹೆಚ್ಚು ಸಾವಿನ ಶಂಕೆ, ಟಿಪ್ಪರ್​ಗಳು ಚೆಲ್ಲಾಪಿಲ್ಲಿ

New Project
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯಲ್ಲಿ ಶುಕ್ರವಾರ ಬಂಡೆ ಕುಸಿದಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಕೇರಳ ಮೂಲದ ಉದ್ಯಮಿ ಹಕೀಮ್​ ಎಂಬಾತ ಗುತ್ತಿಗೆ ಪಡೆದು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಗಣಿಗಾರಿಕೆ ವೇಳೆ ಬಂಡೆಯೊಂದು ಜೆಸಿಬಿ ಮತ್ತು ಟಿಪ್ಪರ್​ ಮೇಲೆ ಬಿದ್ದಿದ್ದು, 10ಕ್ಕೂ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಾರ್ಮಿಕರು ರಾಜಸ್ಥಾನ, ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net