ಆರು ಐಎಎಸ್ ಅಧಿಕಾರಿಗಳ ವರ್ಗ

Vidhanasoudha
Published on

ಬೆಂಗಳೂರು: ಆರು ಐಎಎಸ್ ಅಧಿಕಾರಿಗಳನ್ನು ಶುಕ್ರವಾರ ವರ್ಗಾವಣೆ ಮಾಡಿರುವ ಸರ್ಕಾರ, ಓರ್ವ ಐಎಎಸ್ ಅಧಿಕಾರಿಯನ್ನು ಸ್ಥಳ ತೋರಿಸಿದೆ ವರ್ಗಾಯಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್‌ರನ್ನು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ)ರಾಗಿ ವರ್ಗಾಯಿಸಿದೆ. ಭೂ ಮಾಪನ ಇಲಾಖೆ ಆಯುಕ್ತರಾಗಿದ್ದ ಮೌದ್ಗಿಲ್ ಅವರನ್ನು ೆಬ್ರವರಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿತ್ತು. ಜತೆಗೆ ಬಿಬಿಎಂಪಿ ವಿಶೇಷ ಆಯುಕ್ತರಾಗಿ ಅಕ್ಟೋಬರ್ 13ರಂದು ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಡಿಪಿಎಆರ್‌ನಿಂದ ಬಿಡುಗಡೆ ಗೊಳಿಸಿ ಪೂರ್ಣ ಬಿಬಿಎಂಪಿಗೆ ಸ್ಥಳನಿಯುಕ್ತಿಗೊಳಿಸಲಾಗಿದೆ.
ಉದ್ಯೋಗ ಮತ್ತು ತರಬೇತಿ ಆಯುಕ್ತೆಯಾಗಿದ್ದ ಕೆ.ಜ್ಯೋತಿ ಅವರನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷೆಯಾಗಿ ವರ್ಗಾಯಿಸಿದ್ದರೆ ಈ ಹುದ್ದೆಯಲ್ಲಿದ್ದ ಆರ್.ರಾಮಚಂದ್ರನ್ ಅವರಿಗೆ ಯಾವುದೇ ಸ್ಥಳ ತೋರಿಸದೆ ವರ್ಗಾಯಿಸಲಾಗಿದೆ.
ಆರ್ಥಿಕ ನೀತಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿಯಾಗಿದ್ದ ಪಿ.ಐ. ಶ್ರೀವಿದ್ಯಾ ಅವರನ್ನು ರಾಷ್ಟ್ರೀಯ ಜೀವನೋಪಾಯ ಯೋಜನೆಯ ನಿರ್ದೇಶಕಿಯಾಗಿ, ಡಾ.ಆರ್. ರಾಗಪ್ರಿಯಾರನ್ನು ಉದ್ಯೋಗ ಮತ್ತು ತರಬೇತಿ ಆಯುಕ್ತರಾಗಿ ವರ್ಗಾಯಿಸಲಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕಿ ಆರ್.ವಿನೋತ್ ಪ್ರಿಯಾರನ್ನು ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತೆಯಾಗಿ, ಬಿಎಂಟಿಸಿ (ಐಟಿ) ನಿರ್ದೇಶಕಿ ಆರ್. ಸ್ನೇಹಾಲ್‌ರನ್ನು ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರಾಗಿ ವರ್ಗಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net