ಮಳೆ ಸೃಷ್ಟಿಸಿದ ಅವಾಂತರ...; ಏನಿರಬಹುದು ಇಲ್ಲಿ ಮುಳುಗಿದ್ದು?

Car In Water
Published on

ರಾಷ್ಟ್ರರಾಜಧಾನಿಯಲ್ಲಿ ಸಿಕ್ಕಾಪಟೆ ಆಗುತ್ತಿದೆ. ಇಂದು ಕೂಡ ವಿಪರೀತ ಮಳೆ ಸುರಿದಿದ್ದು ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಕೂಡ ನೀರು ತುಂಬಿದ್ದು, ಜನ, ವಾಹನ ಸಂಚಾರಕ್ಕೆ ತೊಡಕಾಗಿದೆ.

ಅಂಡರ್​ಪಾಸ್​ಗಳಲ್ಲಿ ಮುಳುಗುವಷ್ಟು ನೀರು ನಿಂತಿದ್ದು, ರಸ್ತೆಗಳ ಮೇಲೆ ಕೂಡ ಸೊಂಟದಷ್ಟು ಎತ್ತರಕ್ಕೆ ಬರುವಷ್ಟು ನೀರು ಇದೆ. ಅನೇಕ ಕಡೆಗಳಲ್ಲಿ ಮರಗಳು ಮುರಿದುಬಿದ್ದು, ವಿದ್ಯುತ್​ ವ್ಯತ್ಯಯವಾಗಿದೆ. ಗುರ್​ಗಾಂವ್​, ನೊಯ್ಡಾಗಳಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ಮಳೆಯಲ್ಲಿ ಸಿಲುಕಿದ ಅದೆಷ್ಟೋ ಜನರು ತಮ್ಮ ಮನೆಯನ್ನು ತಲುಪಲು ಪರದಾಡುವಂತಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದನ್ನೂ ಓದಿ: ಏಕತಾ ಮೂರ್ತಿಗೆ ಸಿಐಎಸ್​ಎಫ್​ ಕಾವಲು; ಆಗಸ್ಟ್​ 25ರಂದು 275 ಸಿಬ್ಬಂದಿ ನಿಯೋಜನೆ

ದಕ್ಷಿಣ ದೆಹಲಿಯ ಸಾಕೇತ್​​ನಲ್ಲಿರುವ ಶಾಲೆಯೊಂದರ ಕಾಂಪೌಂಡ್ ಗೋಡೆ ಕುಸಿದು ಸುಮಾರು ಏಳು ಕಾರುಗಳು ಜಖಂಗೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಗುರ್​ಗಾಂವ್​ ಅಂಡರ್​ಪಾಸ್​​ನಲ್ಲಿ ನಿಂತಿದ್ದ ಕಾರೊಂದು ಮುಕ್ಕಾಲು ಭಾಗ ಮುಳುಗಿದ್ದು, ಅದರ ಮೇಲ್ಮೈ ಮಾತ್ರ ಕಾಣಿಸುತ್ತಿದೆ. ಈ ಫೋಟೋ ಕೂಡ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ದೆಹಲಿಯಲ್ಲಿ ನಿನ್ನೆಯಿಂದಲೇ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net