

ಕಡೂರು: ಹೋಟೆಲ್‌ನಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ ಮಾಲೀಕನ ಮನೆಯಲ್ಲೇ 1.40 ಲಕ್ಷ ರೂ. ನಗದು ಕಳವು ಪರಾರಿಯಾಗಿದ್ದವನನ್ನು ಸಖರಾಯಪಟ್ಟಣ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸಖರಾಯಪಟ್ಟಣದ ಮಹ್ಮದ್ ಉಮೇರ್ ಬಂಧಿತ ಆರೋಪಿ. ಆ.31ರಂದು ಸಖರಾಯಪಟ್ಟಣದ ಶಬಾನಾ ಎಂಬುವವರ ಮನೆಗೆ ನುಗ್ಗಿ ಮನೆಯ ಬೀರುವಿನಲ್ಲಿದ್ದ ಹಣವನ್ನು ಕಳವು ಮಾಡಿ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ತಂಡ ರಚಿಸಿಕೊಂಡಿದ್ದರು. ಶನಿವಾರ ಸಂತೆ ಮೈದಾನದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಕಳ್ಳತನ ಮಾಡಿದ ಹಣದಲ್ಲಿ ಹೊಸದಾಗಿ ಖರೀದಿಸಿದ ಎರಡು ಮೊಬೈಲ್‌ಗಳು, 27 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಜಿ.ಆರ್.ಆದರ್ಶಕುಮಾರ್, ಪಿ.ಕಿರಣ್‌ಕುಮಾರ್, ಸಿಬ್ಬಂದಿ ಇದ್ದರು.