ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ಮನೆಗೆ ಬಿಎಸ್​ವೈ ಭೇಟಿ: ಮೃತನ ತಾಯಿಗೆ 10 ಲಕ್ಷ ರೂ. ನೆರವು

gundlupete ravi bsy
Published on

ಗುಂಡ್ಲುಪೇಟೆ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ, ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಬಿಜೆಪಿ ಬೂತ್ ಅಧ್ಯಕ್ಷ ರವಿ ಮನೆಗೆ ಬಿಎಸ್​ವೈ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಮೃತನ ತಾಯಿಗೆ ಸಾಂತ್ವನ ಹೇಳಿದರು.

ರವಿ ಸಾವಿನ ವಿಚಾರ ನೋವು ತಂದಿದೆ ಎಂದು ಕಂಬನಿ ಮಿಡಿದ ಬಿಎಸ್​ವೈ, ರವಿ ತಾಯಿಗೆ 5 ಲಕ್ಷ ರೂಪಾಯಿ ನೆರವು ಕೊಟ್ಟರು. ಮನೆ ಕಟ್ಟಿಸಿಕೊಳ್ಳಲು ಮತ್ತೆ 5 ಲಕ್ಷ ರೂ. ಕಳುಹಿಸುವೆ ಎಂದು ಭರವಸೆ ನೀಡಿದರು.

ಬೆಂಗಳೂರಿಂದ ವಿಮಾನದಲ್ಲಿ ಗುಂಡ್ಲುಪೇಟೆಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಶಾಸಕ ಎನ್.ಮಹೇಶ್ ಸ್ವಾಗತಿಸಿದರು. 'ಬರ್ತಾನಪ್ಪ ಬರ್ತಾನೇ ರಾಜಾಹುಲಿ..' ಎಂದು ಕಾರ್ಯಕರ್ತರು ಜೈಕಾರ ಹಾಕಿದರು. ಇದೇ ವೇಳೆ ಮಾತನಾಡಿದ ಯಡಿಯೂರಪ್ಪ, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿ ಪಕ್ಷವನ್ನ ಅಧಿಕಾರಕ್ಕೆ ತರುತ್ತೇನೆ. ಅಧಿಕಾರ ಇಲ್ಲದಿದ್ರೂ ಜನರು ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net