ಅಣ್ಣನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸ್ಥಳದಲ್ಲೇ ಪ್ರಾಣಬಿಟ್ಟ ತಂಗಿ!

death
Published on

ರಾಯಚೂರು: ಅಣ್ಣನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೀಡಾದ ತಂಗಿ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ರಾಯಚೂರಿನ ಹುಣಸಿಹಾಳ ಹುಡಾ ಗ್ರಾಮದಲ್ಲಿ ಸಂಭವಿಸಿದೆ.

ಹುಣಸಿಹಾಳಹುಡಾ ಗ್ರಾಮದ ನರಸಪ್ಪ ಹೀರಾ (65) ಮತ್ತು ಇವರ ತಂಗಿ ಸಿರಿವಾರದ ಸಿದ್ದಮ್ಮ (50) ಮೃತರು. ಅನಾರೋಗ್ಯದ ಹಿನ್ನಲೆ ಸೋಮವಾರ ರಾತ್ರಿ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ನರಸಪ್ಪ ಅವರನ್ನ ದಾಖಲಿಸಲಾಗಿತ್ತು. ಅನಾರೋಗ್ಯಕ್ಕೀಡಾದ ಅಣ್ಣನನ್ನು ಮಾತನಾಡಿಸಲೆಂದು ಸಿರವಾರದಿಂದ ಹುಣಸಿಹಾಳಹುಡಾ ಗ್ರಾಮಕ್ಕೆ ಸಿದ್ದಮ್ಮ ಬಂದಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅಣ್ಣ ಕೊನೆಯುಸಿರೆಳೆದರು. ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎದೆ ಬಡಿದುಕೊಂಡ ಸಿದ್ದಮ್ಮ ಕ್ಷಣಾರ್ಧದಲ್ಲೇ ಕೊನೆಯುಸಿರೆಳೆದರು. ಅನ್ಯೋನ್ಯತೆಯಿಂದ ಬಾಳಿ ಬದುಕಿದ್ದ ಅಣ್ಣ -ತಂಗಿ ಸಾವಿನಲ್ಲೂ ಒಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net