ರಾಣಿ ಎಲಿಜಬೆತ್​ ನಿಧನ, ಬ್ರಿಟನ್​ನಲ್ಲಿ 10 ದಿನ ರಾಷ್ಟ್ರೀಯ ಶೋಕ: ಪ್ರಧಾನಿ ಮೋದಿ ಸಂತಾಪ

Elizabeth
Published on

ಲಂಡನ್​: ಬ್ರಿಟನ್​ನಲ್ಲಿ ಸುದೀರ್ಘ ಅವಧಿವರೆಗೆ ಆಳ್ವಿಕೆ ನಡೆಸಿದ ಖ್ಯಾತಿ ಹೊಂದಿದ್ದ ರಾಣಿ ಎಲಿಜಬೆತ್​ 11 ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾದರು. ರಾಣಿಯ ಗೌರವಾರ್ಥ ಬ್ರಿಟನ್​ನಲ್ಲಿ 10 ದಿನಗಳ ಕಾಲ ರಾಷ್ಟ್ರೀಯ ಶೋಕ ಘೋಷಿಸಲಾಗಿದೆ.

ಪ್ರಧಾನಿ ಮೋದಿ ಸಂತಾಪ: ರಾಣಿ ಎಲಿಜಬೆತ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. "2015 ಮತ್ತು 2018ರಲ್ಲಿ ಬ್ರಿಟನ್​ಗೆ ತೆರಳಿದ್ದಾಗ ಎಲಿಜಬೆತ್​ ಅವರನ್ನು ಭೇಟಿ ಮಾಡಿದ್ದೆ. ಅವರ ಪ್ರೀತಿ ಮತ್ತು ಔದಾರ್ಯವನ್ನು ಎಂದಿಗೂ ಮರೆಯುವುದಿಲ್ಲ. ಭೇಟಿ ಸಂದರ್ಭದಲ್ಲಿ ಎಲಿಜಬೆತ್​ ಅವರು ತಮ್ಮ ಮದುವೆಗೆ ಮಹಾತ್ಮ ಗಾಂಧಿ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ತೋರಿಸಿದ್ದರು' ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಣಿ ಎಲಿಜಬೆತ್​ 2021ರ ಅಕ್ಟೋಬರ್​ನಿಂದ ನಡೆಯಲು ಮತ್ತು ನಿಲ್ಲಲು ಕಷ್ಟಪಡುತ್ತಿದ್ದರು. ಗುರುವಾರ ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ವೈದ್ಯರು ಅವರನ್ನು ತೀವ್ರ ನಿಗಾದಲ್ಲಿ ಇಟ್ಟಿದ್ದರು. ಕುಟುಂಬ ಸದಸ್ಯರು, ಸಂಬಂಧಿಕರು ಬೆಳಗ್ಗೆಯಿಂದಲೇ ಬಾಲ್ಮೋರಲ್​ ಅರಮನೆಗೆ ದೌಡಾಯಿಸತೊಡಗಿದ್ದರು. ಗುರುವಾರ ರಾತ್ರಿ ಕೊನೆಯುಸಿರೆಳೆದರು.

ರಾಣಿ ಎಜಿಜಬೆತ್​ ಅವರಿಗೆ 96 ವರ್ಷ ವಯಸ್ಸಾಗಿತ್ತು. ಜಗತ್ತಿನಲ್ಲೇ ಸುಧೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜವಂಶಸ್ಥೆಯಾಗಿ ಎಲಿಜಬೆತ್​ ದಾಖಲೆ ನಿರ್ಮಿಸಿದ್ದರು. ರಾಣಿಯ ಪಾರ್ಥಿವ ಶರೀರವನ್ನು ಬಾಲ್ಮೋರಲ್​ ಎಸ್ಟೇಟ್​ನಲ್ಲಿ ಇಡಲಾಗಿದ್ದು, ಶುಕ್ರವಾರ ಲಂಡನ್​ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆ ತಿಳಿಸಿದೆ.

Koo App
RIP Queen Elizabeth-II. A stalwart with a reign of seven decades, she was Britain’s longest serving monarch. This is the end of an era. My heartfelt condolences to the people of the UK. @PIB_India
View attached media content
-Hardeep Singh Puri (@hardeepspuri)9 Sep 2022
Koo App
My condolences to the people of the UK on the demise of Her Majesty #QueenElizabethII. She was one of the longest serving monarchs and a true friend of India. It is a tremendous loss for the people of England and all of us.
View attached media content
-Piyush Goyal (@piyushgoyal)9 Sep 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net