

ಹಾವೇರಿ: ಮನೆ ಮುಂಭಾಗ ಆಟವಾಡುತ್ತಿದ್ದ ಎರಡು ವರ್ಷದ ಬಾಲಕನೋರ್ವ ಆಕಸ್ಮಿಕವಾಗಿ ನೀರಿನ ಸಂಪ್ ಒಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ನವನಗರದಲ್ಲಿ ನಡೆದಿದೆ.
ಚರಣ್ (3 ಚರ್ಷ) ನೀರಿನ ಸಂಪ್ ಒಳಗೆ ಬಿದ್ದು ಮೃತಪಟ್ಟ ಬಾಲಕ. ಮೃತ ಚರಣ್, ದುರಗಪ್ಪ ವಿಭೂತಿ ಎಂಬುವರ ಪುತ್ರನಾಗಿದ್ದು, ಕಳೆದ ಹಲವು ವರ್ಷಗಳಿಂದ ಮನೆಯಿಲ್ಲದೇ ಶೆಡ್ ನಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.