

ಚಿಕ್ಕಮಗಳೂರು: 20 ವರ್ಷದ ಯುವತಿಯೊಬ್ಬಳು ಅಪ್ರಾಪ್ತ ಬಾಲಕನನ್ನು ಮದುವೆಯಾಗಿದ್ದು, ಇದೀಗ ಆಕೆ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರಿನ 20 ವರ್ಷದ ಯುವತಿಗೆ ಫೇಸ್ಬುಕ್ ಮೂಲಕ 17 ವರ್ಷದ ಬಾಲಕನ ಪರಿಚಯವಾಗಿತ್ತು. ಉಭಯ ಕುಟುಂಬದವರಿಗೆ ಒಪ್ಪಿಗೆಯಾದ ಬಳಿಕ ಕಡೂರು ತಾಲೂಕು ಬಿಸಿಲೇಹಳ್ಳಿ ಗ್ರಾಪಂನ ಬ್ರಹ್ಮಸಮುದ್ರ ಗ್ರಾಮದ ಬಾಲಕನ ಮನೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಜೂ.16ರಂದು ಮದುವೆ ನೆರವೇರಿತ್ತು. ಇದನ್ನೂ ಓದಿರಿ ಗಂಡಂದಿರ ಕಿರುಕುಳ: ತಂಗಿ ಸತ್ತ 17 ದಿನಕ್ಕೆ ಅಕ್ಕನೂ ಸಾವು! ಇವರಿಬ್ಬರ ದುರಂತ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ
ಈ ಕುರಿತು ಜೂ.23ರಂದು ಮಕ್ಕಳ ಸಹಾಯವಾಣಿ 1098ರ ಮೂಲಕ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಸಖರಾಯಪಟ್ಟಣ ಠಾಣೆ ಪೊಲೀಸರ ಜತೆಗೆ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಗ್ರಾಪಂ ಕಾರ್ಯದರ್ಶಿ ಇಂದ್ರಮ್ಮ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಅವರು ಯುವತಿಯನ್ನು ವಶಕ್ಕೆ ಪಡೆದರು. ಯುವತಿ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ, ಕರೊನಾ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನು ಚಿಕ್ಕಮಗಳೂರಿನ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ದುವೆ.