ಬಿಟ್ ಕಾಯಿನ್ ಪ್ರಕರಣ: ನಾವೂ ಹೋಮ್ ವರ್ಕ್ ಮಾಡ್ತಾ ಇದ್ದೇವೆ ಎಂದ ಡಿಕೆಶಿ

DKshi
Published on

ಬೆಂಗಳೂರು: ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ಸರ್ಕಾರದ ನಡೆ ಗಮನಿಸುತ್ತಿದ್ದೇವೆ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಮಾಹಿತಿ ಅವಲೋಕಿಸುತ್ತಿದ್ದೇವೆ. ಈ ವಿಷಯದಲ್ಲಿ ನಾವೂ ಹೋಮ್ ವರ್ಕ್ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಸಿ ದಾಖಲೆ ಹೊರಗಿಡುವುದು ಬಿಜೆಪಿ ಸರ್ಕಾರದ ಜವಾಬ್ದಾರಿ. ಜಪ್ತಿ ಮಾಡಿದ ಬಿಟ್ ಕಾಯಿನ್ ಎಲ್ಲಿ ಹೋದವು. ಇಡಿ ತನಿಖಾ ಪ್ರಗತಿ ಮಾಹಿತಿ ಕೇಳಿದ್ದು, ಸರ್ಕಾರ ಸ್ಪಂದಿಸಿಲ್ಲ. ಇಷ್ಟರ ಮಧ್ಯೆಯೂ ಪಕ್ಷ ಒಂದೊಂದಾಗಿ ದಾಖಲೆ‌ ಬಹಿರಂಗ ಮಾಡುತ್ತಿದೆ.

ಈ ಹಗರಣದ ಬಗ್ಗೆ ಮನಸ್ಸಿಗೆ ಬಂದಂತೆ ಹೇಳಿಕೆ‌ ನೀಡಲಾಗದು. ಕೆಪಿಸಿಸಿ ಅಧ್ಯಕ್ಷನಾಗಿ ಯಾವಾಗ ಏನು ಹೇಳಬೇಕು ಗೊತ್ತಿದೆ. ಯಾವುದಕ್ಕೂ ಎದೆಗುಂದುವುದಿಲ್ಲ. ಹೋಮ್ ವರ್ಕ್ ಮುಗಿದ ನಂತರ ನಿಮ್ಮ ಬಂದೆ ಬರುವೆ ಎಂದು ಡಿ.ಕೆ.ಶಿವಕುಮಾರ್ ನಿಗೂಢವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net