ಸರ್ವರೂ ಎಚ್ಚರದಿಂದ ಇರಬೇಕು... ಇಂದು ಬೆಳ್ಳಂಬೆಳಗ್ಗೆ ಕಾರ್ಣಿಕ ನುಡಿದ ಮೈಲಾರಸ್ವಾಮಿ

biruru mailaraswamy karnika
Published on

ಚಿಕ್ಕಮಗಳೂರು: ಇಂದು(ಶನಿವಾರ) ಮುಂಜಾನೆ 5:17ಕ್ಕೆ ಬೀರೂರು ಪಟ್ಟಣದ ಮೈಲಾರಸ್ವಾಮಿ ಕಾರ್ಣಿಕ ನುಡಿದಿದ್ದು, ಸರ್ವರಿಗೂ ಎಚ್ಚರದಿಂದ ಇರಲು ಸೂಚನೆ ಬಂದಿದೆ.

ಶುಕ್ರವಾರ ರಾತ್ರಿ ಮೈಲಾರಲಿಂಗ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ಇಂದು ಮುಂಜಾನೆ ನೂರಾರು ಭಕ್ತರ ಮುಂದೆ ದಶರತ ಪೂಜಾರ್ ಅವರು 'ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಸಿಂಹಾಸನಕ್ಕೆ ಗಿಳಿಗಳು ಕುಟಿಕಿದ್ದಾವು. ದಾನವರು ಮಾನವರಿಗೆ ಕಂಟಕವಾದರೂ ರಾಮರಾಜ್ಯಕ್ಕೆ ಸರ್ವರು ಹೊಡೆಹೊಡೆದ್ರು. ಸರ್ವರೂ ಎಚ್ಚರದಿಂದರಬೇಕು..' ಎಂದು ಕಾರ್ಣಿಕದ ನುಡಿದಿದ್ದಾರೆ. ದೇಶದ ಆಗುಹೋಗುಗಳ ಕುರಿತು ಮೈಲಾರಸ್ವಾಮಿ ನುಡಿದ ಭವಿಷ್ಯ ಇದು ಎಂದು ಭಕ್ತರು ಹೋಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net