ರಾಜ್ಯ ಪ್ರವೇಶಿಸಿದ ಭಾರತ್​ ಜೋಡೋ ಯಾತ್ರೆ: ಕಾಡಿನ ದಾರಿಯಲ್ಲೇ ರಾಹುಲ್​ಗಾಂಧಿಗೆ ಸ್ವಾಗತ ಕೋರಿದ ಕಾಂಗ್ರೆಸ್​ ನಾಯಕರು

bharath jodo rahul
Published on

ಚಾಮರಾಜನಗರ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸಿದೆ. ತಮಿಳುನಾಡಿನ ಮೂಲಕ ಕರ್ನಾಟಕದ ಗುಂಡ್ಲುಪೇಟೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿರುವ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೆಕ್ಕನಳ್ಳ ಕಾಡಿನ ದಾರಿಯಲ್ಲೇ ನಿಂತು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದರು.

ಕಾಫಿ-ತಿಂಡಿ ಮಾಡಲೆಂದು ಮಾರ್ಗಮಧ್ಯೆ ಗುಂಡ್ಲುಪೇಟೆಯ ಹಂಗಳ ಗ್ರಾಮದ ಖಾಸಗಿ ರೆಸಾರ್ಟ್​ಗೆ ರಾಹುಲ್​ ಗಾಂಧಿ ಅವರನ್ನು ಕಾಂಗ್ರೆಸ್​ ನಾಯಕರು ಕರೆದೊಯ್ದರು. ಬಳಿಕ ಗುಂಡ್ಲುಪೇಟೆಯತ್ತ ಹೊರಟರು. ಗುಂಡ್ಲುಪೇಟೆ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಭಾವಚಿತ್ರದ ಬ್ಯಾನರ್, ಫ್ಲೆಕ್ಸ್​ಗಳೇ ರಾರಾಜಿಸುತ್ತಿವೆ.

ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ. ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಲಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net