

Expensive Airport: ಎಲ್ಲರಿಗೂ ಒಮ್ಮೆಯಾದರೂ ವಿಮಾನ ಏರಿ ವಿದೇಶಕ್ಕೆ ಟ್ರಿಪ್ ಹೋಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ಬಡವರು, ಮಧ್ಯಮ ವರ್ಗದ ಜನರಿಗೆ ಇದು ಕನಸಾಗಿಯೇ ಉಳಿಯುತ್ತದೆ. ಶ್ರೀಮಂತ ವರ್ಗದವರು ಮಾತ್ರ ಈ ವಿಮಾನ ಯಾನಕ್ಕೆ ಸಾಟಿಯಾದ ಜನರು ಎಂದು ಎಲ್ಲರೂ ಭಾವಿಸಿದ್ದಾರೆ. ಯಾಕೆಂದರೆ ವಿಮಾನ ಏರಿ ಪ್ರವಾಸಕ್ಕೆ ಹೋಗುವ ಖರ್ಚು ಸಾಮಾನ್ಯ ಜನಕ್ಕೆ ಕೈಗೆಟಕುವುದಿಲ್ಲ. ಅಂದಹಾಗೆ ವಿಶ್ವದಲ್ಲೇ ಅತ್ಯಂತ ವಿಮಾನ ನಿಲ್ದಾಣವೊಂದಿದೆ. ಇಲ್ಲಿ ಆಹಾರ ಮಾತ್ರವಲ್ಲದೇ ಕಾಫಿ, ಟೀ, ನೀರಿನ ಬಾಟಲಿ ಕೂಡ ತುಂಬಾ ದುಬಾರಿ. ಹಾಗಾದ್ರೆ ಅದು ಯಾವ ವಿಮಾನ ನಿಲ್ದಾಣ? ಅದರ ವಿಶೇಷತೆಗಳೇನು ಗೊತ್ತಾ? ಇಲ್ಲಿದೆ ನೋಡಿ.
ಇಸ್ತಾನ್‌ಬುಲ್ ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯಂತ ದುಬಾರಿ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಯಾಕೆಂದರೆ ಈ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆಗಳು ಕೂಡ ಅತೀ ಹೆಚ್ಚು.
ಇಲ್ಲಿ ನೀವೇನಾದರೂ ಒಂದು ಬಾಳೆಹಣ್ಣನ್ನು ಖರೀದಿಸಿದರೆ ಬೆಲೆ ಕೇಳಿ ಶಾಕ್ ಆಗ್ತೀರಾ. ಯಾಕಂದ್ರೆ ಇಲ್ಲಿ ಒಂದು ಬಾಳೆಹಣ್ಣಿನ ಬೆಲೆ 565 ರೂ. ಒಂದು ಪಿಂಟ್ ಬಿಯರ್ 1,697 ರೂ. ಫಾಸ್ಟ್-ಫುಡ್ಗಳು ಸಹ ತುಂಬಾ ದುಬಾರಿ.
ಹೆಚ್ಚು ಪ್ರಯಾಣಿಕರು ಬರುವ ಕಾರಣ ಮತ್ತು ಎಲ್ಲಾ ರೀತಿ ಐಷಾರಾಮಿ ಸೌಲಭ್ಯಗಳು ಇಲ್ಲಿರುವ ಕಾರಣ ಈ ನಿಲ್ದಾಣ ದುಬಾರಿಯಾಗಿದೆ ಎನ್ನಲಾಗಿದೆ. ಹೀಗಾಗಿ ಪ್ರಯಾಣಿಕರು ಇಲ್ಲಿ ಬೇರೆ ವಿಧಿಯಿಲ್ಲದೆ ಹಣವನ್ನು ಖರ್ಚು ಮಾಡಬೇಕಾಗಿದೆ. ಜಗತ್ತಿನ ಅತ್ಯಂತ ದುಬಾರಿಯಾದ ಈ ವಿಮಅನ ನಿಲ್ದಾಣಕ್ಕೆ ಪ್ರತಿನಿತ್ಯ 2,20,000 ಕ್ಕೂ ಹೆಚ್ಚು ಪ್ರಯಾಣಿಕರು ಬರುತ್ತಾರೆ.(ಏಜೆನ್ಸೀಸ್)