ಪ್ರಿಯಕರನ ಜತೆ ಲಾಡ್ಜ್​ಗೆ ಹೋದಾಕೆ ವಾಪಸ್​ ಬಂದದ್ದು ಶವವಾಗಿ! ಆ ಕೋಣೆಯಲ್ಲಿತ್ತು ಪುರುಷರಿಬ್ಬರ ಜತೆಗಿನ ರಹಸ್ಯ

New Project (2)
Published on

ಬಾಗೇಪಲ್ಲಿ: ಗಂಡನೊಂದಿಗೆ ವಿಚ್ಛೇದನ ಪಡೆದು ಮಾಜಿ ಪ್ರಿಯಕರನೊಂದಿಗೆ ಲಾಡ್ಜ್​ಗೆ ತೆರಳಿದ್ದ ಮಹಿಳೆಯೊಬ್ಬಳು ಅಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಸಾವಿಗೂ ಮುನ್ನ ಆಕೆ ಬರೆದಿಟ್ಟ ಡೆತ್​ನೋಟ್​ನಲ್ಲಿ ಇಬ್ಬರು ಪುರುಷರೊಂದಿಗಿನ ಅಕ್ರಮ ಸಂಬಂಧದ ಬಗ್ಗೆಯೂ ಉಲ್ಲೇಖಿಸಿದ್ದಾಳೆ. ​

ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ವೀಣಾ(26) ಮೃತ ಮಹಿಳೆ. ಮುಳಬಾಗಿಲಿನ ಮುರಳಿ ಎಂಬಾತನೊಂದಿಗೆ ವೀಣಾಗೆ 8 ವರ್ಷಗಳ ಹಿಂದೆ ವಿವಾಹವಾಗಿತ್ತು. ಕೆಲ ದಿನಗಳ ಹಿಂದೆ ವೀಣಾ, ಆತನೊಂದಿಗೆ ವಿಚ್ಚೇದನ ಪಡೆದಿದ್ದಳು. ನಂತರ ಮಾಜಿ ಪ್ರಿಯಕರ ಮುಳಬಾಗಿಲಿನ ಪುನೀತ್​​ ಮತ್ತು ಲಕ್ಷ್ಮೀಕಾಂತ್​ ಎಂಬುವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಮಾಜಿ ಪ್ರಿಯಕರ ಪುನೀತ್​ ಜತೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್​​ನಲ್ಲಿ ಕೊಠಡಿ ತೆಗೆದುಕೊಂಡು ವೀಣಾ ಉಳಿದುಕೊಂಡಿದ್ದಳು. ನಿನ್ನೆ(ಶುಕ್ರವಾರ) ಅದ್ಹೇನಾಯ್ತೋ ಏನೋ, ಲಾಡ್ಜ್​ನ ಕೋಣೆಯಲ್ಲೇ ವೀಣಾಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರ ಜತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿದಿದೆ ಎಂದು ಮರ್ಯಾದೆಗೆ ಅಂಜಿ ನೇಣು ಬಿಗಿದು ಕೊಂಡಿರುವುದಾಗಿ ತಿಳಿಸಿ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಬಾಗೇಪಲ್ಲಿ ಪೊಲೀಸ್​ ವೃತ್ತ ನಿರೀಕ್ಷಕ ಡಿ.ಆರ್​.ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ವೀಣಾಳ ಪ್ರಿಯಕರ ಪುನೀತ್​ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net