2 ನಿಮಿಷದಲ್ಲಿ 80 ಪ್ರಶ್ನೆಗೆ ಉತ್ತರ! ವಿಶ್ವ ದಾಖಲೆ ಬರೆದ 8 ವರ್ಷದ ಬಾಲೆ

New Project(7)
Published on

ಬದಿಯಡ್ಕ (ಕಾಸರಗೋಡು): ಎಂಟರ ಹರೆಯದ ಪುಟಾಣಿ ಎರಡು ನಿಮಿಷದಲ್ಲಿ 80 ಪ್ರಶ್ನೆಗಳಿಗೆ ಉತ್ತರಿಸಿ ಅಬಾಕಸ್​ ನಡೆಸಿದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಪ್ರಸ್ತುತ ನೆದರ್​ಲೆಂಡ್​ನಲ್ಲಿ ವಾಸಿಸುತ್ತಿರುವ, ಮೂಲತಃ ನೀರ್ಚಾಲು ನಿವಾಸಿ ಸಾತ್ವಿಕ್​ ಚಾತ್ರ ಹಾಗೂ ಅಕ್ಷತಾ ಚಾತ್ರಾ ದಂಪತಿಯ ಪುತ್ರಿ ಅರುಹ್ಯ ಈ ಸಾಧನೆ ಮಾಡಿದ್ದಾಳೆ. ಈಕೆ ಪ್ರಕಾಶ್​ ಭಟ್ ಮತ್ತು ಅನುರಾಧಾ ಭಟ್​ ದಂಪತಿ ಮೊಮ್ಮಗಳು. ಈಕೆಯ ಸಾಧನೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಅಬಾಕಸ್​ ಮುಖ್ಯಸ್ಥೆ ಸೀಮಾ ಜೈನ್​, ಅರುಹ್ಯಳ ಸಾಧನೆ ನಂಬಲಸಾಧ್ಯ. ಯಾವುದೇ ರೀತಿಯ ಗಣಿತ ಚಮತ್ಕಾರವನ್ನೂ ಕ್ಷಣಗಳಲ್ಲಿ ಪರಿಹರಿಸುವ ಈಕೆಗೆ ಗಣಿತ ಆಟದ ವಿಷಯ ಎಂದರು.

ಅಬಾಕಸ್​ ಮಾನಸಿಕ ಏಕಾಗ್ರತೆಯ ಸುಧಾರಣೆ, ಮಾನಸಿಕ ವಿಕಾಸದ ನೆಲೆಯಲ್ಲಿ ವಿಶ್ವಮಟ್ಟದ ಗಣಿತ ಸ್ಪರ್ಧೆ ಆಯೋಜಿಸುತ್ತದೆ. 2021-22ನೇ ಸಾಲಿನ ಸ್ಪರ್ಧೆಯಲ್ಲಿ ಅರುಹ್ಯ ವರ್ಲ್ಡ್​ ಚಾಂಪಿಯನ್​ ಪಟ್ಟ ಗಿಟ್ಟಿಸಿಕೊಂಡಿರುವುದು ಹೆಮ್ಮೆ ಮೂಡಿಸಿದೆ ಎಂದು ಸೀಮಾ ಜೈನ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net