ಚಾಮರಾಜನಗರ ಗಣಿ ಮಾಲೀಕರಿಗೆ ಶಾಕ್, ನಾಳೆಯಿಂದ ಒಂದು‌‌ ತಿಂಗಳು ಎಲ್ಲ ಕ್ವಾರಿಗಳು ಬಂದ್!

New Project
Published on

ಚಾಮರಾಜನಗರ: ಜಿಲ್ಲೆಯ ಎಲ್ಲ ಕ್ವಾರಿಗಳನ್ನು ನಾಳೆಯಿಂದ ಬಂದ್ ಮಾಡಲು ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.

ಕಲ್ಲು ಗಣಿಕಾರಿಕೆ ಸ್ಥಳದಲ್ಲಿ ಬಂಡೆ ಕುಸಿತ ಕುಸಿತ ಪ್ರಕರಣ ಪರಿಶೀಲ‌ನೆಗಾಗಿ ಮಡಹಳ್ಳಿ ಬಿಳಿಕಲ್ಲು ಕ್ವಾರಿಗೆ ಬಂದಿದ್ದ ಸಚಿವರು ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಎಲ್ಲ ಗಣಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ನಾಳೆಯಿಂದ ಒಂದು ತಿಂಗಳ ಕಾಲ ಭೇಟಿ ನೀಡಿ ಪರಿಶೀಲನೆ ನಡೆಸುವರು‌. ಸಕ್ರಮ ಗಣಿಗಾರಿಕೆ ಮುಂದುವರಿಯಲಿದೆ. ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲಾಗುವುದು ಎಂದು ವಿವರಿಸಿದರು.

ಗಣಿ ಇಲಾಖೆ ಡಿಡಿಗೆ ತರಾಟೆ: ಬಂಡೆ ಕುಸಿತ ಪ್ರಕರಣದ ಸಂಬಂಧ ಪರಿಶೀಲನೆ ನಡೆಸಲು ಗುಂಡ್ಲುಪೇಟೆಗೆ ಆಗಮಿಸಿದ್ದ ಸೋಮಣ್ಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪ ನಿರ್ದೇಶಕ ನಾಗಭೂಷಣ್​ಗೆ ಬೆವರಿಳಿಸಿದರು. ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಸ್ವಾಗತಿಸಲು ನಿಂತಿದ್ದ ನಾಗಭೂಷಣ್​ಗೆ, ನೀನು ಇಷ್ಟು ದಿನ ತಿಂದಿದ್ದು ಸಾಕು. ಇನ್ನಾದರೂ ಕೆಲಸ ಮಾಡು. ನಾನು ಮೂರು ದಿನ ಇದ್ದು ಹೋಗಲು ಸಿದ್ದ ಇದ್ದೇನೆ. ನಿನ್ನ ಹಾಗೆ ಗೂಟ ಹೊಡೆದುಕೊಂಡು ಕುಳಿತಿರಲು ಸಿದ್ಧವಿಲ್ಲ. ಎಲ್ಲ ಅವ್ಯವಹಾರಗಳಿಗೂ ತಾಯಿ ಬೇರು ನೀವು. ನಿಮ್ಮ ಪೋಷಣೆಯಿಂದಲೇ ಎಲ್ಲ ನಡೆಯುತ್ತಿದೆ. ಇದನ್ನು ಹೇಗೆ ಮಟ್ಟ ಹಾಕುತ್ತೇನೆ ನೋಡಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net