ಎಕ್ಸಾಂ ಹಾಲ್​ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಫೋಟೋ-ಸಹಿ! ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿಗೆ ಶಾಕ್

Actress Aishwarya Rai’s photo on exam admit card
Published on

ಜಾರ್ಖಂಡ್​: ಪರೀಕ್ಷೆಗೂ ಮುನ್ನ ದಿನವೇ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಪ್ರವೇಶ ಪತ್ರ ಪಡೆಯಲು ಸೈಬರ್​ ಸೆಂಟರ್​ಗೆ ಹೋದ ವಿದ್ಯಾರ್ಥಿನಿಗೆ ಶಾಕ್​ ಕಾದಿತ್ತು. ತನ್ನ ಫೋಟೋ ಇರುವ ಜಾಗದಲ್ಲಿ ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಐಶ್ವರ್ಯಾ ರೈ ಅವರ ಫೋಟೋ ನೋಡಿ ಗಲಿಬಿಲಿಗೊಂಡ ವಿದ್ಯಾರ್ಥಿನಿ ಒಂದಲ್ಲ ಎರಡಲ್ಲ, ಹಲವು ಬಾರಿ ಪ್ರವೇಶ ಪತ್ರವನ್ನ ನೋಡಿದ್ದಾರೆ. ಎಲ್ಲ ಮಾಹಿತಿಯೂ ಸರಿ ಇದೆ. ಆದರೆ ಫೋಟೋ ಮತ್ತು ಸಹಿ ಮಾತ್ರ ಬದಲಾಗಿದೆ!

ಇಂತಹ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಬಿನೋದ್ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದ ಪಿಜಿ ಸೆಮಿಸ್ಟರ್-2 ಪರೀಕ್ಷೆ ಇಂದಿನಿಂದ(ಅಕ್ಟೋಬರ್​ 2) ಶುರುವಾಗಲಿದ್ದು, ಮುನ್ನಾ ದಿನವಾದ ಸೋಮವಾರ ಸಂಜೆ ಪ್ರವೇಶ ಪತ್ರವನ್ನ ವಿವಿ ವೆಬ್​ಸೈನ್​ನಲ್ಲಿ ಬಿಡುಗಡೆ ಮಾಡಿತ್ತು. ಪಿಜಿ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕಾಜಲ್ ಕುಮಾರಿ ಪ್ರವೇಶ ಪತ್ರ ಪಡೆಯಲು ಸೈಬರ್ ಕೆಫೆಗೆ ಹೋಗಿದ್ದರು. ಆಕೆಯ ಪ್ರವೇಶ ಪತ್ರದಲ್ಲಿ ನಟಿ ಐಶ್ವರ್ಯಾ ರೈ ಅವರ ಫೋಟೋ ಮತ್ತು ಸಹಿ ಕಂಡು ಗಾಬರಿಯಾಗಿದ್ದಾಳೆ.

ವಿಶ್ವವಿದ್ಯಾಲಯದ ಯಡವಟ್ಟಿನಿಂದಲೇ ಈಗಾಗಿದೆ ಎಂಬ ಆರೋಪ ಕೇಳಿಬಂದಿದೆ. ಅತ್ತ, ವಿದ್ಯಾರ್ಥಿನಿಯು ಫಾರ್ಮ್​ ಭರ್ತಿ ಮಾಡುವ ಸರಿಯಾದ ಮಾಹಿತಿ ಹಾಗೂ ತನ್ನದೇ ಫೋಟೋ ಹಾಕಿರುವೆ. ಅರ್ಜಿ ಹಾಕಿದ ಬಳಿಕ ಪ್ರಿಂಟೌಟ್​ ತೆಗೆದ ಫಾರ್ಮ್​ ಕೂಡ ಸರಿಯಾಗಿತ್ತು. ಆನ್​ಲೈನ್​ನಲ್ಲಿ ಪ್ರವೇಶ ಪತ್ರ ಪಡೆಯಲು ಹೋದಾಗ ಫೋಟೋ ಮತ್ತು ಸಹಿ ಬಲಾಗಿದೆ. ನನಗೆ ಎಕ್ಸಾಂ ಬರೆಯಲು ಅವಕಾಶ ಸಿಗುತ್ತೋ ಇಲ್ಲವೋ ಎಂಬ ಭಯ ಕಾಡುತ್ತಿದೆ. ಯಾರೋ ಮಾಡಿದ ತಪ್ಪಿಗೆ ನನಗ್ಯಾಕೆ ಶಿಕ್ಷೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಬಿಎಂಕೆಯು ಪರೀಕ್ಷಾ ನಿಯಂತ್ರಕ ಎಸ್‌.ಕೆ. ಬರನ್‌ವಾಲ್, ವಿವಿಯ ಹೆಸರು ಕೆಡಿಸಲು ಯಾರೋ ಸಂಚು ನಡೆಸಿ ಹೀಗೆ ಮಾಡಿದ್ದಾರೆ. ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಯು ಅರ್ಜಿ ಭರ್ತಿ ವೇಳೆ ಸರಿಯಾಗಿಯೇ ಅಪ್​ಲೋಡ್​ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದೂ ತಿಳಿಸಿದ್ದಾರೆ.(ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net